ಬಜೆಟ್ ನಂತರ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಸಾಧ್ಯತೆ?

By Suvarna Web DeskFirst Published Jan 31, 2018, 1:25 PM IST
Highlights

ಕಳೆದ ನಾಲ್ಕು ವರ್ಷಗಳಿಂದ ಏರುಗತಿಯಲ್ಲೇ ಸಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಏಪ್ರಿಲ್ ನಂತರ ಕಡಿಮೆಯಾಗುವ ಸಾಧ್ಯತೆ ಅಧಿಕವಾಗಿದೆ.

ಬೆಂಗಳೂರು (ಜ.31): ಕಳೆದ ನಾಲ್ಕು ವರ್ಷಗಳಿಂದ ಏರುಗತಿಯಲ್ಲೇ ಸಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಏಪ್ರಿಲ್ ನಂತರ ಕಡಿಮೆಯಾಗುವ ಸಾಧ್ಯತೆ ಅಧಿಕವಾಗಿದೆ.

ಕೇಂದ್ರದಲ್ಲಿ ಎನ್‌'ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ.

ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್'ಗೆ 73.99 ರುಪಾಯಿ ಇದ್ದರೆ, ಡೀಸೆಲ್ ಬೆಲೆ 65.08 ರೂಪಾಯಿ ಇದೆ. ಇದರ ಜೊತೆಗೆ ದೇಶಾದ್ಯಂತ ಬೆಲೆ ಏರಿಗೆ  ಏರುಗತಿಯಲ್ಲೇ ಸಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಇಂಧನ ಇಲಾಖೆ  ಮುಂದಿ ಬಜೆಟ್‌ನಲ್ಲಿ  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವಂತೆ ಕೇಳಿಕೊಂಡಿದೆ. ಇಂಧನ ಸಚಿವಾಲಯದ ಮನವಿಯನ್ನು ಪರಿಗಣಿಸಿರುವ ಹಣಕಾಸು ಇಲಾಖೆ ಈ ಬಗ್ಗೆ  ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದೆ. ಒಂದು ವೇಳೆ ದೇಶದ ಜನರ ಹಿತದೃಷ್ಟಿಯಿಂದ ಹಣಕಾಸು ಇಲಾಖೆ ಅಬಕಾರಿ ಸುಂಕದಲ್ಲಿ ಕಡಿತ ಮಾಡಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಸು ಅಗ್ಗವಾಗಲಿದೆ.

  

click me!