
ನವದೆಹಲಿ(ಜು.04): ನೋಟ್ ಬ್ಯಾನ್ ಘೋಷಣೆಯಿಂದ ತಮ್ಮ ಹಣವನ್ನು ಅಂತಿಮ ದಿನಾಂಕದ ಮೊದಲು ಡೆಪಾಸಿಟ್ ಮಾಡದಿರಲು ಸಾಧ್ಯವಾಗದ ಕುರಿತಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಆರ್'ಬಿಐ ಬಳಿ ಮಹತ್ವದ ಪ್ರಶ್ನೆ ಕೇಳಿದೆ. ನೋಟ್ ಬ್ಯಾನ್ ಸಂದರ್ಭದಲ್ಲಿ ಅಮಾನ್ಯಗೊಂಡ ನೋಟುಗಳನ್ನು ಡೆಪಾಸಿಟ್ ಮಾಡಲು ನೀಡಿದ ಅಂತಿಮ ದಿನಾಂಕದೊಳಗೆ ಹಣ ಜಮಾ ಮಾಡಲು ಸಾಧ್ಯವಾಗದಿರುವವರಿಗೆ ಮತ್ತೊಂದು ಅವಕಾಶ ಯಾಕೆ ನೀಡಬಾರದು? ಎಂದು ಸುಪ್ರೀಂ ಪ್ರಶ್ನಸಿದೆ.
ನೈಜ ಕಾರಣಗಳಿಂದ ತಮ್ಮ ಹಣ ಬ್ಯಾಂಕ್'ಗೆ ಡೆಪಾಸಿಟ್ ಮಾಡಲು ಸಾಧ್ಯವಾಗದಿರುವವರ ಸಂಪತ್ತನ್ನು ಸರ್ಕಾರ ಈ ರೀತಿ ಕಸಿದುಕೊಳ್ಳುವುದು ಸರಿಯಲ್ಲ. ನೋಟ್ ಬ್ಯಾನ್ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಜೈಲಿನಲ್ಲಿದ್ದರೆ ಆತ ಹಣ ಡೆಪಾಸಿಟ್ ಹೇಗೆ ಮಾಡುವುದು ಎಂದಿರುವ ಸುಪ್ರೀಂ ನೈಜ ಕಾರಣವಿರುವವರಿಗೆ ಹಳೆ ನೋಟುಗಳನ್ನು ಜಮಾವಣೆ ಮಾಡಲು ಮತ್ತೊಂದು ಅವಕಾಶ ನೀಡಬೇಕು. ಹೀಗೆ ಮಾಡದಿದ್ದಲ್ಲಿ ಇದೊಂದು ಗಂಭೀರ ಪ್ರಕರಣವಾಗಲಿದೆ ಎಂದು ತಿಳಿಸಿದೆ.
ಈ ವಿಚಾರವಾಗಿ ಉತ್ತರಿಸಲು ಎರಡು ವಾರಗಳ ಅವಕಾಶ ಯಾಚಿಸಿರುವ ಕೇಂದ್ರ ಸರ್ಕಾರ 'ಕಾರಣಗಳನ್ನು ಆಲಿಸಿ ಡೆಪಾಸಿಟ್'ಗೆ ಅವಕಾಶ ನೀಡಬೇಕೋ ಬೇಡವೋ ಎಂಬುವುದನ್ನು ನಿರ್ಧರಿಸುವುದು RBI ಗೆ ಬಿಟ್ಟ ವಿಚಾರ' ಎಂದಿದೆ.
ಅಚ್ಚರಿಯ ವಿಚಾರವೆಂದರೆ ಮಹಿಳೆಯೊಬ್ಬಳ ಕೇಸ್ ವಿಚಾರಣೆ ಸಂದರ್ಭದಲ್ಲಿ ಈ ಸುಪ್ರೀಂ ಈ ಪ್ರಶ್ನೆ ಎತ್ತಿದೆ. ಮಹಿಳೆಯು ತಾನು ನೋಟ್ ಬ್ಯಾನ್ ಸಂದರ್ಭದಲ್ಲಿ ಡೆಲಿವರಿಯಾಗಿ ಆಸ್ಪತ್ರೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೆ ಹೀಗಾಗಿ ನಿಗದಿಪಡಿಸಿದ ಅಂತಿಮ ದಿನಾಂಕದೊಳಗೆ ಹಣ ಜಮಾವಣೆ ಮಾಡಲು ಸಾಧ್ಯವಾಗಿರಲಿಲ್ಲ ಎಂದು ದೂರು ಸಲ್ಲಿಸಿದ್ದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.