ಈಶಾನ್ಯ ಭಾಗದಲ್ಲಿ ಮುಗಿದಿದೆ, ಶೀಘ್ರದಲ್ಲೆ ಕರ್ನಾಟಕದಲ್ಲೂ ಸಮಾಪ್ತಿ

By Suvarna Web DeskFirst Published Mar 3, 2018, 8:46 PM IST
Highlights

ಗೆಲುವಿನಲ್ಲಿ ಅಮಿತ್ ಶಾ ಹಾಗೂ ತಂಡ ಮುಖ್ಯಪಾತ್ರ ವಹಿಸಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದವರೆಲ್ಲರೂ ಶ್ರೀಮಂತರು, ಸೆಲಬ್ರಿಟಿಗಳಲ್ಲ. ಬಹುತೇಕರು 25ರ ಆಸುಪಾಸಿನವರು. ಸಾಮಾನ್ಯ ಜನರು'

ನವದೆಹಲಿ(ಮಾ.03): ಈಶಾನ್ಯ ರಾಜ್ಯಗಳಾದ ತ್ರಿಪುರ ಹಾಗೂ ನಾಗಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತದಾರರು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಅವರು, ಯಾವುದೇ ಮನೆ ಕಟ್ಟಲು ಈಶಾನ್ಯ ಭಾಗವೇ ಬಹಳ ಮುಖ್ಯ. ಇನ್ನು ಮುಂದೆ ಈಶಾನ್ಯ ಭಾಗದ ರಾಜ್ಯಗಳಲ್ಲಿ ವಿಶೇಷ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗುವುದು. ಗೆಲುವಿನಲ್ಲಿ ಅಮಿತ್ ಶಾ ಹಾಗೂ ತಂಡ ಮುಖ್ಯಪಾತ್ರ ವಹಿಸಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದವರೆಲ್ಲರೂ ಶ್ರೀಮಂತರು, ಸೆಲಬ್ರಿಟಿಗಳಲ್ಲ. ಬಹುತೇಕರು 25ರ ಆಸುಪಾಸಿನವರು. ಸಾಮಾನ್ಯ ಜನರು' ಎಂದು ವಿಜಯ ಸಾಧಿಸಿದ ಅಭ್ಯರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶೀಘ್ರದಲ್ಲಿಯೇ ಕರ್ನಾಟಕದಲ್ಲಿ ಮುಕ್ತಾಯ ಮಾಡುತ್ತೇವೆ

ಈಶಾನ್ಯ ಭಾರತದಲ್ಲಿ ಗೆಲುವು ಸಾಧಿಸಿದ್ದು ಆಗಿದೆ. ಇನ್ನು ಮುಂದಿನ ಸರದಿ ಕರ್ನಾಟಕದ್ದು. ಕರ್ನಾಟಕದಲ್ಲಿ ನಮ್ಮ ಕಾರ್ಯಕರ್ತರ ಹತ್ಯೆಗಳಿಗೆ,ಭ್ರಮೆ ಹಾಗೂ ಭಯ ಉಂಟುಮಾಡುವವರಿಗೆಲ್ಲಾ ಜನರೆ ತಕ್ಕ ಪಾಠ ಕಲಿಸುತ್ತಾರೆ. ತ್ರಿಪುರದ ಗೆಲುವನ್ನು ಘರ್ಷಣೆಯಲ್ಲಿ ಮೃತಪಟ್ಟ ಬಿಜೆಪಿ ಸದಸ್ಯರಿಗೆ ಅರ್ಪಿಸಿದರು.

click me!