
ಮೇಲ್ಬೋರ್ನ್(ಜೂ.29) ನೀವು ವಾರದಲ್ಲಿ ಎಷ್ಟು ದಿನ ಕೆಲಸ ಮಾಡುತ್ತೀರಾ? ಇದೆಂಥ ಪ್ರಶ್ನೆ ವಾರದಲ್ಲಿ 5 ಅಥವಾ 6 ದಿನ ಕೆಲಸ ಮಾಡುತ್ತೇವೆ ಎಂಬ ಉತ್ತರ ನಿಮ್ಮಿಂದ ಬರಬಹುದು. ಆದರೆ ವಾಸ್ತವವೇ ಬೇರೆ. ಇಲ್ಲೊಂದು ಸ್ಟಡಿ ಹೊಸ ಅಂಶವೊಂದನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದೆ.
ಮೆಲ್ಬೋರ್ನ್ ವರ್ಕರ್ ಪೇಪರ್ ಸೀರಿಸ್ ನವರು ಮಾಡಿರುವ ಅಧ್ಯಯನ ಬೇರೆಯದೇ ಸತ್ಯ ಹೇಳುತ್ತಿದೆ. 40 ವರ್ಷ ಮೇಲ್ಪಟ್ಟವರಿಗೆ ವಾರದಲ್ಲಿ ಕೇವಲ ಮೂರು ದಿನ ಮಾತ್ರ ಕೆಲಸ ನೀಡಬೇಕು ಎಂಬ ಸಲಹೆಯನ್ನು ಅಧ್ಯಯನ ನೀಡುತ್ತಿದೆ. ಯಾಕೆ ಹೀಗೆ ಎಂಬುದಕ್ಕೆ ಕಾರಣಗಳ ಸಮೇತ ಉತ್ತರವನ್ನು ನೀಡಿದೆ.
ಅಧ್ಯಯನಕ್ಕೋಸ್ಕರ 40 ವರ್ಷ ಮೇಲ್ಪಟ್ಟ 3,500 ಮಹಿಳೆಯರು ಮತ್ತು 3,000 ಪುರುಷರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರು ಮಾಡುವ ಕೆಲಸ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳ ಮೇಲೆ ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಲಾಯಿತು. ನಿಗದಿತ ಸಮಯದೊಳಗೆ ಅಂಕೆ ಮತ್ತು ಅಕ್ಷರಗಳನ್ನು ಮ್ಯಾಚ್ ಮಾಡುವುದು, ವಿವಿಧ ಸಂದರ್ಭದ ಪ್ರತಿಕ್ರಿಯೆ ಪಡೆದುಕೊಳ್ಳುವುದು. ದೊಡ್ಡದಾಗಿ ಓದುವುದು.. ಹೀಗೆ ಅನೇಕ ಬಗೆಯ ಟೆಸ್ಟ್ ಗಳನ್ನು ನೀಡಿ ಒಂದು ಅಂತಿಮ ತೀರ್ಮಾನಕ್ಕೆ ಬರಲಾಯಿತು.
ವಾರಕ್ಕೆ 25 ಗಂಟೆ ಕಾಲ ಕೆಲಸ ಮಾಡುವವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡುವವರು ಒತ್ತಡದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.