ಯೋಧ ತೇಜ್ ಹೇಳಿದ್ದು ನಿಜ!, ಅಧಿಕಾರಿಗಳು ಪಡಿತರ ಮಾರಾಟ ನಡೆಸುತ್ತಿದ್ದಾರೆ: ಪರಿಶೀಲನೆ ವೇಳೆ ಸತ್ಯ ಒಪ್ಪಿಕೊಂಡ ಶ್ರೀನಗರ ನಾಗರಿಕರು

By Suvarna Web DeskFirst Published Jan 11, 2017, 8:07 AM IST
Highlights

ಬಿಎಸ್‌ಎಫ್‌ ಅಧಿಕಾರಿಗಳಿಂದ ಅರ್ಧದರಕ್ಕೆ ರೇಷನ್‌ ಮಾರಾಟವಾಗುತ್ತಿರುವುದು ಸತ್ಯ ಎಂದು ಜಮ್ಮು ಕಾಶ್ಮೀರದ ಶ್ರೀನಗರದ ಜನತೆ ಆರೋಪಿಸಿದ್ದಾರೆ. BSF ಶಿಬಿರಗಳ ಸಮೀಪದ ನಾಗರಿಕರೇ, ಮಾರುಕಟ್ಟೆ ದರಕ್ಕಿಂತ ಅರ್ಧದಷ್ಟು ಬೆಲೆಗೆ ಮಿಲಿಟರಿ ಅಧಿಕಾರಿಗಳು ಮಾರುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಯೋಧ ತೇಜ್‌ ಬಹದ್ದೂರ್‌ ಯಾದವ್‌ ಆರೋಪದಲ್ಲಿ ಯಾವುದೇ ಸುಳ್ಳಿಲ್ಲ ಎಂಬುದು ಅಲ್ಲಿನ ನಾಗರಿಕರ ಹೇಳಿಕೆಗಳಿಂದ ಸಾಬೀತಾಗಿದೆ.

ಶ್ರೀನಗರ(ಜ.11): ಬಿಎಸ್‌ಎಫ್‌ ಅಧಿಕಾರಿಗಳಿಂದ ಅರ್ಧದರಕ್ಕೆ ರೇಷನ್‌ ಮಾರಾಟವಾಗುತ್ತಿರುವುದು ಸತ್ಯ ಎಂದು ಜಮ್ಮು ಕಾಶ್ಮೀರದ ಶ್ರೀನಗರದ ಜನತೆ ಆರೋಪಿಸಿದ್ದಾರೆ. BSF ಶಿಬಿರಗಳ ಸಮೀಪದ ನಾಗರಿಕರೇ, ಮಾರುಕಟ್ಟೆ ದರಕ್ಕಿಂತ ಅರ್ಧದಷ್ಟು ಬೆಲೆಗೆ ಮಿಲಿಟರಿ ಅಧಿಕಾರಿಗಳು ಮಾರುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಯೋಧ ತೇಜ್‌ ಬಹದ್ದೂರ್‌ ಯಾದವ್‌ ಆರೋಪದಲ್ಲಿ ಯಾವುದೇ ಸುಳ್ಳಿಲ್ಲ ಎಂಬುದು ಅಲ್ಲಿನ ನಾಗರಿಕರ ಹೇಳಿಕೆಗಳಿಂದ ಸಾಬೀತಾಗಿದೆ.

ಹುಮ್‌ಹಮಾದಲ್ಲಿರುವ ಬಿಎಸ್‌ಎಫ್‌ ಕೇಂದ್ರ ಕಚೇರಿಯ ಅಂಗಡಿಗಳವರಿಗೆ ಅಧಿಕಾರಿಗಳು ಪೆಟ್ರೋಲ್‌, ಡೀಸೆಲ್, ಬೇಳೆ, ತರಕಾರಿಗಳನ್ನು ಮಾರುಕಟ್ಟೆ ದರಕ್ಕಿಂತ ಅರ್ಧ ದರಕ್ಕೆ ಮಾರಾಟ ಮಾಡುತ್ತಾರೆ ಎಂದು ಸ್ಥಳೀಯರು ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳು ಯೋಧರಿಗೆ ಕೊಡಬೇಕಾದ ವಸ್ತುಗಳನ್ನು, ಯೋಧರಿಗೆ ನೀಡದೆ, ಮಾರಾಟ ಮಾಡುತ್ತಿದ್ದಾರೆ ಎಂಬ ತೇಜ್ ಬಹಾದ್ದೂರ್ ಸಿಂಗ್ ಆರೋಪ, ನಾಗರಿಕರ ಈ ಹೇಳಿಕೆಗಳಿಂದ ಸಾಬೀತಾಗಿದೆ.

Latest Videos

ಇನ್ನೊಬ್ಬ ಗುತ್ತಿಗೆದಾರರು, ಮಿಲಿಟರಿ ಅಧಿಕಾರಿಗಳು ತಾವು ಪೂರೈಸುವ ವಸ್ತುಗಳಿಗೆ ಕಮಿಷನ್ ಪಡೆಯುತ್ತಾರೆ. ಕಮಿಷನ್ ಆಸೆಗಾಗಿ ಗುಣಮಟ್ಟದಲ್ಲಿ ರಾಜಿಯಾಗುತ್ತಾರೆ ಎಂದು ಆರೋಪಿಸಿದ್ದಾರೆ.

click me!