ರಾಮ್ ರಹೀಂ ಆಯ್ತು, ನಿತ್ಯಾನಂದನಿಗೇಕಿಲ್ಲ?: ಫೇಸ್ಬುಕ್'ನಲ್ಲಿ ಶಿಕ್ಷೆ ಬಗ್ಗೆ ಪ್ರಶ್ನೆ ಎತ್ತಿದ್ರೆ ನಿತ್ಯಾನಂದ ಭಕ್ತರ ದಾದಾಗಿರಿ..!

Published : Aug 29, 2017, 08:18 AM ISTUpdated : Apr 11, 2018, 12:35 PM IST
ರಾಮ್ ರಹೀಂ ಆಯ್ತು, ನಿತ್ಯಾನಂದನಿಗೇಕಿಲ್ಲ?: ಫೇಸ್ಬುಕ್'ನಲ್ಲಿ ಶಿಕ್ಷೆ ಬಗ್ಗೆ ಪ್ರಶ್ನೆ ಎತ್ತಿದ್ರೆ ನಿತ್ಯಾನಂದ ಭಕ್ತರ ದಾದಾಗಿರಿ..!

ಸಾರಾಂಶ

ರಾಮ್​ ರಹೀಂ ಬಾಬಾಗೆ ಈಗ 20 ವರ್ಷ ಶಿಕ್ಷೆಯಾಗಿದೆ. ನ್ಯಾಯಾಂಗದ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಇನ್ನೊಂದಿಷ್ಟು ಬಾಬಾಗಳ ವಿರುದ್ಧವೂ ವಾರ್ ಶುರುವಾಗಿದೆ. ನಿತ್ಯಾನಂದ ವಿರುದ್ಧವೂ ಈಗ ವಾರ್ ಶುರುವಾಗಿದೆ. ಅದೇನು ಅಂತಾ ನೀವೇ ನೋಡಿ..

ಬೆಂಗಳೂರು(ಆ.29): ಅತ್ಯಾಚಾರಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್ ರಹೀಮ್ ಸಿಂಗ್​ಗೆ ಹರಿಯಾಣದ ಸಿಬಿಐ ಕೋರ್ಟ್​ ಬರೋಬ್ಬರಿ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಮಾಡಿದ ತಪ್ಪಿಗೆ ಇದೀಗ ರೋಹ್ಟಕ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಇದರ ಬೆನ್ನಲ್ಲೇ ಈಗ ಬಿಡದಿ ನಿತ್ಯಾನಂದನ  ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆ ಶುರುವಾಗಿದೆ.  ಫೇಸ್​'ಬುಕ್​ ಲೈವ್'​ನಲ್ಲಿ ಸೇಲಂ ಮೂಲದ ವ್ಯಕ್ತಿ ಪಿಯೂಷ್ ಮನುಷ್​ ಎಂಬಾತ ನಿತ್ಯಾನಂದ ವಿರುದ್ಧ ಹೇಳಿಕೆ ಪೋಸ್ಟ್​ ಮಾಡಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹೀಂಗೆ ಶಿಕ್ಷೆ ಯಾಗುತ್ತಿದಂತೆ ಇದೀಗ ಅತ್ಯಾಚಾರದ ಆರೋಪ ಎದುರಿಸುತ್ತಿರುವ ನಿತ್ಯಾನಂದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಬಾಬಾನನ್ನು ಜೈಲಿಗಟ್ಟಲು 15 ವರ್ಷ ಬೇಕಾಯ್ತು. ಆದ್ರೆ ತಮಿಳುನಾಡು ಮೂಲದ ನಿತ್ಯಾನಂದನನ್ನು ಜೈಲಿಗಟ್ಟಲು ಇನ್ನೆಷ್ಟು ದಿನಗಳು ಬೇಕು..?

ಹೀಗಂತಾ  ಹಲವು ಬಾಬಾಗಳ ಫೋಟೋ ಹಾಕಿ ಪಿಯೂಷ್ ಪ್ರಶ್ನಿಸಿದ್ದಾನೆ. ಇದಕ್ಕೆ ನಿತ್ಯಾನಂದನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಯ್.. ಪಿಯೂಷ್ ಮನುಷ್ ನೀವು ತಪ್ಪು ಹೇಳ್ತಿದ್ದೀರಾ. ನಿತ್ಯಾನಂದ ಯಾರನ್ನೂ ಅತ್ಯಾಚಾರ ಮಾಡಿಲ್ಲ.

ನಿತ್ಯಾನಂದ ಒಳ್ಳೆಯವರು. ಇವರು ಬೇರೆ ಧರ್ಮಗಳಿಗೆ ತೊಂದರೆ ಕೊಟ್ಟಿಲ್ಲ. ಆದ್ರೆ ಮಾಧ್ಯಮಗಳು ಜನರಿಗೆ  ನಿತ್ಯಾನಂದರ ಬಗ್ಗೆ ತಪ್ಪು ಮಾಹಿತಿ ನೀಡುತ್ತಿವೆ. 

ಹೀಗೆ ಕಾಮೆಂಟ್ ಮಾಡುವ ಮೂಲಕ ನಮ್ಮ ಗುರುಗೆ ತೇಜೋವಧೆ ಮಾಡಲು ಮಾಡುತ್ತಿರುವ ಹುನ್ನಾರವಿದು ಅಂತಾ ನಿತ್ಯಾನಂದ ಭಕ್ತರು ಕಿಡಿ ಕಾರಿದ್ದಾರೆ. ಒಟ್ಟಿನಲ್ಲಿ ರಾಮ್ ರಹೀಂ ಶಿಕ್ಷೆ ಬೆನ್ನಲ್ಲೇ ಈಗ ನಿತ್ಯಾನಂದನ ವಿರುದ್ಧವೂ ಫೇಸ್​ಬುಕ್ ವಾರ್ ಶುರುವಾಗಿದ್ದು, ಕುತೂಹಲ ಕೆರಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೆಬೆನಾನ್ ಮೇಲೆ ಇಸ್ರೇಲ್ ಕಳೆದ 40 ವರ್ಷದಲ್ಲೇ ಅತೀ ಭೀಕರ ದಾಳಿ, 1500 ಮಂದಿ ಹತ್ಯೆ
Breaking ಕದನ ವಿರಾಮ ಉಲ್ಲಂಘನೆ, ಇಸ್ರೇಲ್ ದಾಳಿಯಿಂದ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್?