
ಬೆಂಗಳೂರು (ಸೆ.22): ರಾಜ್ಯದಲ್ಲಿ ಚುನಾವಣೆ ಹತ್ತಿರ ಬರ್ತಿದ್ದಂತೆ ಸರ್ಕಾರದ ಸಮಾವೇಶಗಳು ಜೋರಾಗುತ್ತಿವೆ.. ಇವತ್ತು ಕೂಡ ಕೊಪ್ಪಳದಲ್ಲಿ ಸಮಾವೇಶ ನಡೆಯಿತು. ಆದರೆ ಸರ್ಕಾರದ ಈ ಸಮಾವೇಶ ಜನಸಾಮಾನ್ಯರ ಟೀಕೆಗೆ ಗುರಿಯಾಗಿದೆ.
ಕೊಪ್ಪಳದಲ್ಲಿ ಇವತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಯೋಜನೆಗಳ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶಕ್ಕೆ ಬರದಿದ್ದರೆ ರೇಷನ್ ರದ್ದು ಮಾಡೋದಾಗಿ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದರಂತೆ. ಇದೇ ಕಾರಣಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದಲೂ ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಇವರನ್ನೆಲ್ಲಾ ಸಮಾವೇಶಕ್ಕೆ ಕರೆತರಲು ಜಿಲ್ಲಾಡಳಿತ 1 ಸಾವಿರ ಬಸ್ಗಳನ್ನು ನಿಯೋಜನೆ ಮಾಡಿತ್ತು. ಪರಿಣಾಮ ಕೊಪ್ಪಳ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
ಇನ್ನು ಸಮಾವೇಶದಲ್ಲಿ ಮಂತ್ರಿ ಮಹೋದಯರೆಲ್ಲ ಸರ್ಕಾರದ ಸಾಧನೆಗಳನ್ನ ಹೊಗಳಿದ್ದೇ ಹೊಗಳಿದ್ದು. ಆದರೆ ಸಂಸದ ಕರಡಿ ಸಂಗಣ್ಣ ಮಾತ್ರ ಕೇಂದ್ರದ ಯೋಜನೆಯನ್ನೂ ರಾಜ್ಯ ಸರ್ಕಾರ ತನ್ನದೆಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಮಾತಿನ ಸರದಿ ಬಂದಾಗ ಟಾಂಗ್ ನೀಡಿದರು.
ಒಟ್ಟಿನಲ್ಲಿ ಜನರನ್ನ ಹೆದರಿಸಿ ಸಮಾವೇಶಕ್ಕೆ ಕರೆಯಿಸಿ. ಸಾವಿರಾರು ಬಸ್ಗಳನ್ನೂ ಸಮಾವೇಶಕ್ಕೆ ಬಳಸಿಕೊಂಡು ಜನರಿಗೆ ತೊಂದರೆ ಕೊಡೋದು ಯಾವ ನ್ಯಾಯ..? ಇದಕ್ಕೆ ಸಿಎಂ ಸಾಹೇಬ್ರೇ ಉತ್ತರಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.