ಐಸಿಸ್ ಮುಖ್ಯಸ್ಥ ಬಗ್ದಾದಿ ಇನ್ನೂ ಜೀವಂತ...?

By Suvarna Web DeskFirst Published Jul 22, 2017, 10:14 PM IST
Highlights

2014ರಲ್ಲಿ ಮೊಸೊಲ್'ನ ಗ್ರ್ಯಾಂಡ್ ಅಲ್ ನೌರಿ ಮಸೀದಿಯಲ್ಲಿ ಅಲ್-ಬಗ್ದಾದಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ತನ್ನನ್ನು ತಾನು 'ಖಲೀಫಾ' ಎಂದು ಘೋಷಿಸಿಕೊಂಡಿದ್ದನು.

ವಾಷಿಂಗ್ಟನ್(ಜು.22): ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಮುಖ್ಯಸ್ಥ ಅಬೂಬಕರ್ ಅಲ್ ಬಗ್ದಾದಿ ಇನ್ನೂ ಜೀವಂತವಾಗಿದ್ದಾನೆ ಎಂಬ ಖುರ್ದಿಷ್ ಸೇನೆಯ ವಾದವನ್ನು ಇದೀಗ ಅಮೆರಿಕ ಸಹ ಒಪ್ಪಿಕೊಂಡಿದೆ.

ವೈಮಾನಿಕ ದಾಳಿಯಲ್ಲಿ ಅಲ್-ಬಗ್ದಾದಿ ಸಾವನ್ನಪ್ಪಿದ್ದಾನೆ ಎಂಬುದಾಗಿ ಹಲವು ರಾಷ್ಟ್ರಗಳು ಹೇಳಿವೆ. ಆದರೆ, ಅಮೆರಿಕದ ಭದ್ರತಾ ಕೇಂದ್ರ ಕಚೇರಿ ಮಾತ್ರ ಅಲ್-ಬಗ್ದಾದಿ ಹತ್ಯೆಯಾಗಿದ್ದಾನೆ ಎಂಬುದನ್ನು ಅಲ್ಲಗಳೆಯುತ್ತಲೇ ಬಂದಿದೆ.

ಈ ಬಗ್ಗೆ ಮಾತನಾಡಿದ ಪೆಂಟಗಾನ್‌'ನ ಭದ್ರತಾ ಕಾರ್ಯದರ್ಶಿ ಜಿಮ್ ಮ್ಯಾಟ್ಟಿಸ್, ‘ಬಗ್ದಾದಿ ಜೀವಂತವಾಗಿದ್ದಾನೆ ಎಂಬುದು ನನ್ನ ಅನಿಸಿಕೆ’ ಎಂದು ಹೇಳಿದ್ದಾರೆ. ಬಗ್ದಾದಿ ತಲೆಗೆ ಅಮೆರಿಕ ಸುಮಾರು 161 ಕೋಟಿ ರುಪಾಯಿ ಇನಾಮು ಘೋಷಣೆ ಮಾಡಿದೆ. ಈ ಕಾರಣಕ್ಕಾಗಿಯೇ ಬಗ್ದಾದಿ ತಲೆ ಮರೆಸಿಕೊಂಡಿರಬಹುದು ಎನ್ನಲಾಗಿದೆ.

ಹಲವು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಕಳೆದ ವಾರ ಸಿರಿಯಾದ ಡೀರ್ ಎಜ್ಜೊರ್ ಪ್ರಾಂತ್ಯದಲ್ಲಿನ ವೈಮಾನಿಕ ದಾಳಿಯಲ್ಲಿ ಬಗ್ದಾದಿ ಹತ್ಯೆಯಾಗಿದ್ದಾನೆ ಎಂದು ಬ್ರಿಟನ್ ಮೂಲದ ಸಿರಿಯಾದ ಮಾನವ ಹಕ್ಕುಗಳ ವಿಚಕ್ಷಣ ಸಂಸ್ಥೆ ಹೇಳಿತ್ತು.

2014ರಲ್ಲಿ ಮೊಸೊಲ್'ನ ಗ್ರ್ಯಾಂಡ್ ಅಲ್ ನೌರಿ ಮಸೀದಿಯಲ್ಲಿ ಅಲ್-ಬಗ್ದಾದಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ತನ್ನನ್ನು ತಾನು 'ಖಲೀಫಾ' ಎಂದು ಘೋಷಿಸಿಕೊಂಡಿದ್ದನು.

click me!