ಗೋಮಾಳ ಜಮೀನು ನುಂಗಿದ ಪಿಡಿಒ: ಪ್ರಶ್ನಿಸಿದ ಗ್ರಾಮಸ್ಥರ ವಿರುದ್ಧ ಪಿಡಿಒ ದೌರ್ಜನ್ಯ

By Suvarna Web DeskFirst Published May 21, 2017, 9:15 AM IST
Highlights

ಅದು ಪೂರ್ವಿಕರ ಕಾಲದಿಂದ ಎರಡು ಮೂರು ಗ್ರಾಮಗಳ ಗೋವುಗಳಿಗೆ, ಸಾಕು ಪ್ರಾಣಿಗಳಿಗೆ ಇರುವುದೊಂದೇ ಗೋಮಾಳ ಜಮೀನು. ಅನಾಧಿ ಕಾಲದಿಂದಲೂ ಉಳಿಸಿಕೊಂಡು ಬಂದ ಗ್ರಾಮಸ್ಥರ ಕಣ್ಣಿಗೆ ಗ್ರಾಮ ಪಂಚಾಯಿತಿ ಪಿಡಿಒ ಮಣ್ಣೇರೆಚಿದ್ದಾನೆ. ಅಕ್ರಮವಾಗಿ ಗೋಮಾಳ ಜಮೀನಲ್ಲಿ ಎರಡುವರೆ ಎಕರೆ ತನ್ನ ಹೆಸರಿಗೆ ಮಾಡಿಕೊಂಡಿದ್ದು ಪ್ರಶ್ನಿಸಿದ ಗ್ರಾಮಸ್ಥರನ್ನು ಜೈಲಿಗೆ ಹಾಕಿಸಿ ದರ್ಪ ಮೆರೆದಿದ್ದಾನೆ.

ಕೋಲಾರ(ಮೇ.21): ಅದು ಪೂರ್ವಿಕರ ಕಾಲದಿಂದ ಎರಡು ಮೂರು ಗ್ರಾಮಗಳ ಗೋವುಗಳಿಗೆ, ಸಾಕು ಪ್ರಾಣಿಗಳಿಗೆ ಇರುವುದೊಂದೇ ಗೋಮಾಳ ಜಮೀನು. ಅನಾಧಿ ಕಾಲದಿಂದಲೂ ಉಳಿಸಿಕೊಂಡು ಬಂದ ಗ್ರಾಮಸ್ಥರ ಕಣ್ಣಿಗೆ ಗ್ರಾಮ ಪಂಚಾಯಿತಿ ಪಿಡಿಒ ಮಣ್ಣೇರೆಚಿದ್ದಾನೆ. ಅಕ್ರಮವಾಗಿ ಗೋಮಾಳ ಜಮೀನಲ್ಲಿ ಎರಡುವರೆ ಎಕರೆ ತನ್ನ ಹೆಸರಿಗೆ ಮಾಡಿಕೊಂಡಿದ್ದು ಪ್ರಶ್ನಿಸಿದ ಗ್ರಾಮಸ್ಥರನ್ನು ಜೈಲಿಗೆ ಹಾಕಿಸಿ ದರ್ಪ ಮೆರೆದಿದ್ದಾನೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿಯ ಟಿ.ಕುರುಬರಹಳ್ಳಿ ಸರ್ವೇ ನಂಬರ್ 36ರಲ್ಲಿ 32.21 ಎಕರೆ ಸರ್ಕಾರಿ ಗೋಮಾಳ ಜಮೀನು ಇದೆ. ಆದ್ರೆ ಗ್ರಾಮ ಪಂಚಾಯಿತಿ ಪಿಡಿಓ ಅಧಿಕಾರಿ ತುಳಸಿರಾಮ್ ಶೆಟ್ಟಿ ಅಕ್ರಮವಾಗಿ ತನ್ನ ಹೆಸರಿಗೆ ಎರಡು ಎಕರೆ ಇಪ್ಪತ್ತು ಗುಂಟೆ ಜಮೀನು  ಮಂಜೂರು ಮಾಡಿಸಿಕೊಂಡಿದ್ದಾನೆ.

ಸುಮಾರು ಮೂವತ್ತು ನಲವತ್ತು ವರ್ಷಗಳಿಂದ ಗ್ರಾಮಸ್ಥರು ಗೋಮಾಳ ಜಮೀನನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದ್ರೆ ಗ್ರಾಮ ಪಂಚಾಯತಿ ಪಿಡಿಒ ಏಕಾಏಕಿಯಾಗಿ ಜೆಸಿಬಿ ತಂದು ಗೋಮಾಳದಲ್ಲಿ ಇರುವ ಮರ, ಗಿಡಗಳನ್ನು ತೆಗೆಸಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ನಂಗಲಿ ಪೊಲೀಸರನ್ನು ಕರೆಸಿ ಜೈಲಿಗೆ ಕಳುಹಿಸಿದ್ದಾನೆ. ಪಿಡಿಒ ಹಕ್ಕು ಪತ್ರವನ್ನು ವಜಾ ಮಾಡಿ ಗೋಮಾಳ ಉಳಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಗೋಮಾಳ ಜಮೀನು ಬಡವರಿಗೆ ಸೇರಬೇಕು. ಅನ್ಯಾಯಕ್ಕೊಳಗಾದ ಟಿ.ಕುರುಬರಹಳ್ಳಿ ಗ್ರಾಮಸ್ಥರಿಗೆ ನ್ಯಾಯ ಸಿಗಬೇಕಿದೆ.

 

click me!