‘ಉಗ್ರರಿಗಿಂತ ನಿಮ್ಮ ಸ್ಥಿತಿ ಕೆಟ್ಟದಾಗಿದೆ’ ಗುಲಾಂ ನಬಿ ಆಜಾದ್‌ಗೆ ನಟಿ ‘ಕಲ್ಲಿ’ನೇಟು..!

Published : Aug 06, 2019, 07:56 PM ISTUpdated : Aug 06, 2019, 08:35 PM IST
‘ಉಗ್ರರಿಗಿಂತ ನಿಮ್ಮ ಸ್ಥಿತಿ ಕೆಟ್ಟದಾಗಿದೆ’ ಗುಲಾಂ ನಬಿ ಆಜಾದ್‌ಗೆ ನಟಿ ‘ಕಲ್ಲಿ’ನೇಟು..!

ಸಾರಾಂಶ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಹಿಂದಕ್ಕೆ ಪಡೆದು ಆರ್ಟಿಕಲ್ 370ನ್ನು ರದ್ದು ಮಾಡಿರುವ ಐತಿಹಾಸಿಕ ತೀರ್ಮಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಹಿಂದೊಮ್ಮೆ ಮೋದಿ ಆಡಳಿತ ವೈಖರಿಯನ್ನು ಟೀಕಿಸಿದ್ದವರು ಬದಲಾದ ಕಾಲಘಟ್ಟದಲ್ಲಿ ಜೈಕಾರ ಹಾಕುತ್ತಿದ್ದಾರೆ. ಬಾಲಿವುಡ್ ನಟಿಯೊಬ್ಬರು ಮೋದಿ ತೀರ್ಮಾನವನ್ನು ಕೊಂಡಾಡಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಕಾಲೆಳೆದಿದ್ದಾರೆ.

ಮುಂಬೈ[ಆ. 06]  ನನ್ನ ಟ್ವಿಟರ್ ಅಕೌಂಟ್​ ಅನ್ನ ಮುಂಬೈ ಪೊಲೀಸರು ಬ್ಲಾಕ್​ ಮಾಡಿದ್ದಾರೆ.'ನಾನು ಹಿಂದೂ ನಟಿ. ಆದ್ರೆ ಪೊಲೀಸರ ನಡೆಯಿಂದ ನನಗೆ ಹಿಂದೂಸ್ಥಾನದಲ್ಲಿ ವಾಸಿಸಲು ಭಯವಾಗುತ್ತಿದೆ. ನನ್ನ ಕುಟುಂಬಸ್ಥರು ನನಗೆ ಹಿಂದೂ ಧರ್ಮದ ಪರವಾಗಿ ಮಾತನಾಡಬೇಡ ಅಂತಾ ಯಾಕೆ ಹೇಳುತ್ತಿದ್ದರು ಎಂಬುದು ಈಗ ಅರ್ಧವಾಗುತ್ತಿದೆ'   ಎಂದೆಲ್ಲ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದ ನಟಿ  ಪಾಯಲ್​ ರೋಹ್ಟಗಿ ಇದೀಗ ಮೋದಿ-ಶಾ ಜೋಡಿಯ ಐತಿಹಾಸಿಕ ತೀರ್ಮಾನ ಕೊಂಡಾಡಿದ್ದಾರೆ.

ಆರ್ಟಿಕಲ್ 370ನ್ನು ತೆಗೆದು ಹಾಕಿರುವುದಕ್ಕೆ ಧನ್ಯವಾದ ಸಲ್ಲಿಸಿರುವ ನಟಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್‌ಗೆ ನೀಡಿರುವ ತಿರುಗೇಟನ್ನು ನೋಡಲೇಬೇಕು.  ಕಾಶ್ಮೀರ  ವಿಚಾರದಲ್ಲಿ ಆಜಾದ್ ಇನ್ನು ಮುಂದೆ ಎಚ್ಚರಿಕೆಯಿಂದ ಮಾತನಾಡಬೇಕು ಎಂಬುದನ್ನು ನಟಿ ಸೂಚ್ಯವಾಗಿ ಹೇಳಿದ್ದಾರೆ.

ಕಾಶ್ಮೀರದೊಳಗೆ ಕಡ್ಡಿ ಆಡಿಸಿದ ಆಫ್ರಿದಿಗೆ ಗಂಭೀರ್ ತಿರುಗೇಟು!

‘ ಕಾಂಗ್ರೆಸ್ ನೊಂದಿಗೆ ಡೀಲ್ ಮಾಡಿಕೊಂಡು ಕಳೆದ 70 ವರ್ಷದಿಂದ  ಕುತಂತ್ರ ಸಾಕು. ಪಾಕಿಸ್ತಾನದ ಉಗ್ರಗಾಮಿಗಳಿಗಿಂತ ಈ ಗುಲಾಂ ನಬಿ ಆಜಾದ್ ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಸಂಸತ್ ಅಧಿವೇಶನ ಮುಗಿದ ಮೇಲೆ ಮತ್ತೆ  ಇದೇ ವಿಚಾರವನ್ನು ಕೆದಕಿದರೆ ಅವರ ಮನೆಯ ಮೇಲೆ ಕಲ್ಲು ಬೀಳುತ್ತದೆ ಎಂದು ಹೇಳಿ’

ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಮಾಡಿದಾಗ ಕಾಂಗ್ರೆಸ್ ಸೇರಿದಂತೆ ಕೆಲ ವಿಪಕ್ಷಗಳು ಆಕ್ಷೇಪ ಎತ್ತಿದ್ದವು. ಗುಲಾಂ ನಬಿ ಆಜಾದ್ ಇದು ಪ್ರಜಾಪ್ರಭುತ್ವ ವಿರೋಧಿ ಎಂದು ಮೇಜು ಕುಟ್ಟಿದ್ದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!