1 ಕೋಟಿ ಹಳೆ ನೋಟಿಗೆ ರೂ.9 ಲಕ್ಷ ಹೊಸ ನೋಟು

Published : Jun 15, 2017, 10:29 AM ISTUpdated : Apr 11, 2018, 01:10 PM IST
1 ಕೋಟಿ ಹಳೆ ನೋಟಿಗೆ ರೂ.9 ಲಕ್ಷ ಹೊಸ ನೋಟು

ಸಾರಾಂಶ

ಕೆಲವು ಅನಿವಾಸಿ ಭಾರತೀ​ಯರು ಹಾಗೂ ಕೆಲವು ಏಜೆಂಟರು 500 ರು. ಹಾಗೂ 1000 ರು. ಹಳೆಯ ನೋಟುಗಳನ್ನು ಭಾರಿ ಮೊತ್ತದ ಕಮಿಶನ್‌ಗೆ ಬದಲಾಯಿಸಿಕೊಡುವ ದಂಧೆ ನಡೆಸು​ತ್ತಿರುವ ವಿಷಯ ಬಯಲಾಗಿದೆ.

ಮುಂಬೈ: ಕೆಲವು ಅನಿವಾಸಿ ಭಾರತೀ​ಯರು ಹಾಗೂ ಕೆಲವು ಏಜೆಂಟರು 500 ರು. ಹಾಗೂ 1000 ರು. ಹಳೆಯ ನೋಟುಗಳನ್ನು ಭಾರಿ ಮೊತ್ತದ ಕಮಿಶನ್‌ಗೆ ಬದಲಾಯಿಸಿಕೊಡುವ ದಂಧೆ ನಡೆಸು​ತ್ತಿರುವ ವಿಷಯ ಬಯಲಾಗಿದೆ.

ದೇಶವಾಸಿಗಳಿಗೆ ಹಳೆಯ ನೋಟು​ಗಳನ್ನು ಹೊಸ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಡಿಸೆಂಬರ್‌ 30ರವರೆಗೆ ಮಾತ್ರ ಅವಕಾಶವಿತ್ತು. ಆದರೆ ಅನಿವಾಸಿ ಭಾರತೀಯರಿಗೆ ಜೂನ್‌ 30ರವರೆಗೆ ಅವಕಾಶವಿದೆ. ಹೀಗಾಗಿ ದೇಶದಲ್ಲಿ ಇನ್ನೂ ಹಳೆಯ ನೋಟಿನ ರೂಪದಲ್ಲಿ ಕಪ್ಪುಹಣ ಇಟ್ಟುಕೊಂಡಿರುವ ಕಾಳಧನಿಕರು, ‘ಬಂದಷ್ಟುಬಂತು' ಎಂಬ ಧೋರಣೆ ಅನುಸರಿಸಿ ಎನ್‌ಆರ್‌ಐಗಳನ್ನು ಬಳಸಿಕೊಂಡು ಭಾರಿ ಮೊತ್ತದ ಕಮಿಶನ್‌ ನೀಡಿ ಹಣ ವಿನಿಮಯ ಮಾಡಿಕೊ​ಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ.

ಹೆಸರು ಹೇಳಲಿಚ್ಛಿಸದ ಮಧ್ಯವರ್ತಿಯೊಬ್ಬ ಹೇಳುವಂತೆ, ‘100ಕ್ಕೆ 9 ರು.ನಂತೆ ವಿನಿಮಯ ನಡೆದಿದೆ. ಅಂದರೆ ಭಾರತದಲ್ಲಿನ ಕಾಳಧನಿಕನೊಬ್ಬ ತನ್ನ ಬಳಿ ಹಳೇ ನೋಟಿನ ರೂಪದಲ್ಲಿರುವ 1 ಕೋಟಿ ರು. ನೀಡಿದರೆ ಆತನಿಗೆ ಸಿಗುವುದು ಹೊಸ ನೋಟಿನ ರೂಪದ​ಲಿರುವ 9 ಲಕ್ಷ ರು. ಮಾತ್ರ. ಇನ್ನು ಮಧ್ಯ​ವರ್ತಿಗೆ 1 ಲಕ್ಷ ರು. ಸಿಗುತ್ತದೆ. ಮಿಕ್ಕೆಲ್ಲ ಹಣ ಎನ್‌ಆರ್‌ಐಗೆ ಹೋಗುತ್ತದೆ'.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ