
ನವದೆಹಲಿ(ಸೆ.30): ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಜಾರಿಗೊಳಿಸಿದ್ದ ಮದ್ಯ ನಿಷೇಧ ನೀತಿ ಕಾನೂನು ಬಾಹಿರ ಎಂದು ಪಟನಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
'ದಿ ಬಿಹಾರ್ ಪ್ರೊಹಿಬಿಷನ್ ಆ್ಯಂಡ್ ಎಕ್ಸೈಸ್ ಬಿಲ್ 2016' ಎಂಬ ಹೊಸ ಮದ್ಯನೀತಿಯು ಉಭಯ ಸದನಗಳಲ್ಲಿ ಅಂಗಿಕಾರವಾದ ನಂತರ ರಾಜ್ಯಪಾಲ ರಾಮ್'ನಾಥ್ ಕೋವಿಂದ್ ಅಂಗಿಕಾರ ನೀಡಿದ್ದರು. ಈ ಹೊಸ ಬಿಲ್'ನ ಪ್ರಕಾರ ಮದ್ಯ ಸಂಗ್ರಹ, ತಯಾರಿಕೆ ಮಾಡುವುದು ಅಪರಾಧ. ಒಂದು ವೇಳೆ ಮನೆಯಲ್ಲಿ ಮದ್ಯ ಪತ್ತೆಯಾದರೆ ಕುಟುಂಬ ಸದಸ್ಯರನ್ನು ಬಂಧಿಸಲು ಅವಕಾಶವಿದೆ. ಇದಲ್ಲದೇ ಎಲ್ಲ ಸೆಕ್ಷನ್'ಗಳು ಜಾಮೀನುರಹಿತವಾಗಿದ್ದು ಆರೋಪಿಗೆ ಕೋರ್ಟ್ ಮಾತ್ರವೇ ಜಾಮೀನು ನೀಡಲು ಅವಕಾಶವಿದೆ.
ಈ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಈ ಕಾಯಿದೆಯೇ ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟಿದೆ. ಈ ತೀರ್ಪು ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರಕ್ಕೆ ಬಹುದೊಡ್ಡ ಹಿನ್ನೆಡೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.