ಗಡಿಯಲ್ಲಿ ಯುದ್ಧ ಭೀತಿ: ಕಾಶ್ಮೀರ ಗಡಿ ವ್ಯಾಪ್ತಿಯಿಂದ 2 ಲಕ್ಷ ಜನರ ಸ್ಥಳಾಂತರ....!

By Internet DeskFirst Published Sep 30, 2016, 8:10 AM IST
Highlights

ಶ್ರೀನಗರ(ಸೆ.30): ನಿನ್ನೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದ ಬೆನ್ನಲ್ಲೆ, ಇಂದು ಮತ್ತೋಮ್ಮೆ ಎರಡನೆ ಸಭೆಯನ್ನು ನಡೆಸಲಾಗುತ್ತಿದೆ. ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಭದ್ರತೆಯ ಹಿನ್ನಲೆಯಲ್ಲಿ ಕಾಶ್ಮೀರ ಗಡಿ ವ್ಯಾಪ್ತಿಯಿಂದ 2 ಲಕ್ಷ ಜನರನ್ನು  ಸ್ಥಳಾಂತರ ಮಾಡಲಾಗಿದೆ. 

ಉಗ್ರರ ಭೀತಿ ಇರುವ ಹಿನ್ನಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭದ್ರತೆಯ ಕುರಿತ ಸಮಾಲೋಚನೆಗಾಗಿ ಇಂದು ಮತ್ತೋಂದು ಸಭೆ ನಡೆಯಲಿದ್ದು, ಸಭೆಯಲ್ಲಿ ಮೋದಿ ಭದ್ರತೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.  

Latest Videos

ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಪ್ರಭಾವಿ ಸಚಿವರು ಸೇರಿದಂತೆ ಸೇನಾ ಅಧಿಕಾರಿಗಳು ಹಾಗೂ ರಕ್ಷಣಾ ಮಂತ್ರಾಲಯದ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದು, ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. 

ಗಡಿಯಲ್ಲಿ ಯುದ್ಧ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಭದ್ರತೆಯ ಕಾರಣದಿಂದ ಈಗಾಗಲೆ ಸುಮಾರು ಎರಡು ಲಕ್ಷಕೂ ಹೆಚ್ಚು ಜನರನ್ನು ಜಮ್ಮು ಮತ್ತು ಕಾಶ್ಮೀರ ಗಡಿ ವ್ಯಾಪ್ತಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು ಭದ್ರತೆಯನ್ನು ಹೆಚ್ಚಿಸಲಾಗಿದೆ. 
 

click me!