ವಾಯ್ದೆ ಮುಗಿದು ಹೋದ ಉತ್ಪನ್ನಗಳನ್ನು ಪೂರೈಸಿದೆ ಎಂದು ಪತಂಜಲಿ ಮೇಲೆ ಆರೋಪ

By Suvarna Web DeskFirst Published Sep 13, 2017, 6:30 PM IST
Highlights

ಅಸ್ಸಾಮಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಪತಂಜಲಿ ಸಂಸ್ಥೆ ವಾಯ್ದೆ ಮುಗಿದು ಹೋದ ಉತ್ಪನ್ನಗಳನ್ನು ಪೂರೈಸಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ನವದೆಹಲಿ (ಸೆ.13): ಅಸ್ಸಾಮಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಪತಂಜಲಿ ಸಂಸ್ಥೆ ವಾಯ್ದೆ ಮುಗಿದು ಹೋದ ಉತ್ಪನ್ನಗಳನ್ನು ಪೂರೈಸಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಪತಂಜಲಿ ಸಂಸ್ಥೆ ವಾಯ್ದೆ ಮುಗಿದು ಹೋದ ಹಾಲಿನ ಪುಡಿ, ಜ್ಯೂಸ್ ಪ್ಯಾಕೇಟ್’ಗಳನ್ನು ಪೂರೈಸಿದೆ ಎಂದು ಅಲ್ಲಿನ ಸ್ಥಳೀಯ ಚಾನಲೊಂದು ಪ್ರಸಾರ ,ಮಾಡಿದೆ.

ಈ ಬಗ್ಗೆ ಪತಂಜಲಿ ಕಂಪನಿಯನ್ನು ಸಂಪರ್ಕಿಸಿದಾಗ, ಪತಂಜಲಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಸಾಗಾಣಿಕೆ ಮತ್ತು ಪೂರೈಕೆಯಲ್ಲಿ ನ಻ವು ಯಾವಾಗಲೂ ಜಾಗ್ರತೆ ವಹಿಸುತ್ತೇವೆ. ನಮ್ಮ ಪ್ರತಿನಿಧಿಗಳಲ್ಲದೇ ಬೇರೆ ಯಾರಾದರೂ ವಾಯ್ದೆ ಮುಗಿದು ಹೋದ ಉತ್ಪನ್ನಗಳನ್ನು ನೀಡಿದರೆ ಅದಕ್ಕೆ ನಾವು ಜವಾಬ್ದಾರರಲ್ಲ. ನಾವು ವಾಯ್ದೆ ಮುಗಿದು ಹೋದ ಉತ್ಪನ್ನಗಳನ್ನು ಕಳುಹಿಸಿಲ್ಲ. ಮಾನವೀಯತೆ ದೃಷ್ಟಿಯಿಂದ ಅಸ್ಸಾಮಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾವು ಸಹಾಯ ಮಾಡುತ್ತಿದ್ದೇವೆ ಎಂದು ಪತಂಜಲಿ ಸಂಸ್ಥೆ ಸ್ಪಷ್ಟನೆ ಕೊಟ್ಟಿದೆ.

ಈ ಉತ್ಪನ್ನಗಳ ಸೇವನೆಯಿಂದ ಸಾಕಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ. ಆದರೆ ಜಿಲ್ಲಾಡಳಿತ ಇದನ್ನು ನಿರಾಕರಿಸಿದೆ. ಜಿಲ್ಲಾಡಳಿತ ತನಿಖೆ ಕೈಗೊಂಡಿದೆ.  

 

click me!