400 ರೈಲ್ವೆ ನಿಲ್ದಾಣದಲ್ಲಿನ್ನು ಮಣ್ಣಿನ ಪಾತ್ರೆಗಳಲ್ಲಿ ಊಟ, ತಿಂಡಿ, ತೀರ್ಥ!

Published : Sep 13, 2019, 12:13 PM ISTUpdated : Sep 13, 2019, 12:24 PM IST
400 ರೈಲ್ವೆ ನಿಲ್ದಾಣದಲ್ಲಿನ್ನು ಮಣ್ಣಿನ ಪಾತ್ರೆಗಳಲ್ಲಿ ಊಟ, ತಿಂಡಿ, ತೀರ್ಥ!

ಸಾರಾಂಶ

ರೈಲಿನಲ್ಲಿ ಮಣ್ಣಿನ ಕಪ್‌ನಲ್ಲಿ ಟೀ, ಕಾಫಿ ನೀಡುವ ವ್ಯವಸ್ಥೆ 15 ವರ್ಷಗಳ ಬಳಿಕ ಮರು ಜಾರಿ| ದೇಶದ 400 ರೈಲ್ವೆ ನಿಲ್ದಾಣದಲ್ಲಿನ್ನು ಮಣ್ಣಿನ ಕಪ್‌ನಲ್ಲಿ ಚಹಾ, ಮಣ್ಣಿನ ಪ್ಲೇಟ್‌ನಲ್ಲಿ ಊಟ, ಉಪಹಾರ!| 

ನವದೆಹಲಿ[ಸೆ.13]: ರೈಲಿನಲ್ಲಿ ಮಣ್ಣಿನ ಕಪ್‌ನಲ್ಲಿ ಟೀ, ಕಾಫಿ ನೀಡುವ ವ್ಯವಸ್ಥೆ 15 ವರ್ಷಗಳ ಬಳಿಕ ಮರು ಜಾರಿಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಿಂದ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಶೀಘ್ರದಲ್ಲೇ ಚಹ, ತಿಂಡಿ ಹಾಗೂ ಊಟವನ್ನು ಮಣ್ಣಿನ ಕಪ್‌ ಹಾಗೂ ಮಣ್ಣಿನಲ್ಲಿ ಕರಗುವ ಪಾತ್ರೆಗಳಲ್ಲಿ ಒದಗಿಸಲು ನಿರ್ಧರಿಸಲಾಗಿದೆ. ದೇಶದ ಪ್ರಮುಖ 400 ರೈಲ್ವೆ ನಿಲ್ದಾಣಗಳಲ್ಲಿ ಮುಂಬರುವ ದಿನಗಳಲ್ಲಿ ಈ ಬದಲಾವಣೆ ನೋಡಲು ಸಿಗಲಿದೆ.

ಇನ್ನು ಏರ್‌ಪೋರ್ಟ್‌, ಮಾಲ್‌ಗಳಲ್ಲೂ ಮಣ್ಣಿನ ಕಪ್‌ನಲ್ಲಿ ಟೀ!

ಖಾದಿ ಹಾಗೂ ಗ್ರಾಮೀಣ ಕೈಗಾರಿಕೆಗಳ ಆಯೋಗದ ವತಿಯಿಂದ 30 ಸಾವಿರ ಇಲೆಕ್ಟ್ರಿಕ್‌ ಕುಂಬಾರ ಚಕ್ರಗಳನ್ನು ಹಾಗೂ ಮಣ್ಣು ಕಲಸುವ ಯಂತ್ರಗಳನ್ನು ಒದಗಿಸಲಾಗುವುದು. ಇದರಿಂದ ದಿನನಿತ್ಯ 2 ಕೋಟಿ ಮಣ್ಣಿನ ಕಪ್‌ಗಳು ಹಾಗೂ ಇತರ ಪಾತ್ರೆಗಗಳನ್ನು ತಯಾರಿಸಬಹುದಾಗಿದೆ ಎಂದು ಖಾದಿ ಕೈಗಾರಿಕೆಗಳ ಮುಖ್ಯಸ್ಥ ವಿನಯ್‌ ಸಕ್ಸೇನಾ ಹೇಳಿದ್ದಾರೆ.

ರೈಲ್ವೆ ಇಲಾಖೆ ಈಗಾಗಲೇ ವಲಯವಾರು ರೈಲ್ವೆ ವಿಭಾಗಗಳ ಮುಖ್ಯಸ್ಥರಿಗೆ ಸ್ಥಳೀಯವಾಗಿ ಉತ್ಪಾದನೆಯಾಗುವ ಪರಿಸರ ಸ್ನೇಹಿ ಉತ್ಪನ್ನಗಳಲ್ಲಿ ಆಹಾರ ಒದಗಿಸುವಂತೆ ಸೂಚನೆ ನೀಡಿದೆ. ಉತ್ತರ ಪ್ರದೇಶ ರಾಯ್‌ ಬರೇಲಿ ಮತ್ತು ವಾರಾಣಸಿ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ಗಳು ಬಳಕೆಯಲ್ಲಿವೆ.

ಇನ್ನು ಏರ್‌ಪೋರ್ಟ್‌, ಮಾಲ್‌ಗಳಲ್ಲೂ ಮಣ್ಣಿನ ಕಪ್‌ನಲ್ಲಿ ಟೀ!

2004ರಲ್ಲಿ ಲಾಲು ಪ್ರಸಾದ್‌ ಯಾದವ್‌ ರೈಲ್ವೆ ಸಚಿವರಾಗಿದ್ದ ವೇಳೆ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ನಲ್ಲಿ ಚಹ ಹಾಗೂ ಕಾಫಿ ನೀಡುವ ವ್ಯವಸ್ಥೆ ಜಾರಿಗೊಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!