ಚೆನ್ನೈ(ಸೆ.15): ಕಳೆದ ಜುಲೈನಲ್ಲಿ ವಾಯುಪಡೆಗೆ ಸೇರಿದ AN-32 ವಿಮಾನ ನಾಪತ್ತೆಯಾದ ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಸೇನೆ ದೃಢಪಡಿಸಿದೆ.
ತಮಿಳುನಾಡಿನ ತಾಂಬರಮ್ ಏರ್ಬೇಸ್ನಿಂದ ಜು.22ರಂದು ಅಂಡಮಾನ್ ನಿಕೋಬರ್ನ ಪೋರ್ಟ್ಬ್ಲೇರ್ಗೆ ತೆರಳುತ್ತಿದ್ದಾಗ ವಿಮಾನ ನಾಪತ್ತೆಯಾಗಿತ್ತು. ಈ ಕುರಿತಂತೆ ತನಿಖೆ ನಡೆಸಿದ ಅಧಿಕಾರಿಗಳು ವಾಯುಪಡೆ ವಿಮಾನ ಪತನಗೊಂಡಿರುವುದು ದೃಢಪಡಿಸಿದ್ದಾರೆ. ಈ ಸಂಬಂಧ ವಾಯುಪಡೆ ಮೃತರ ಕುಟುಂಬಗಳಿಗೆ ಪತ್ರದ ಮೂಲಕ ಮಾಹಿತಿ ರವಾನಿಸಿದೆ.
ಪತನದ ವೇಳೆ ವಿಮಾನದಲ್ಲಿದ್ದ ಎಲ್ಲಾ 29 ಮಂದಿ ಸಾವನ್ನಪ್ಪಿದ್ದಾರೆ ಎಂದು ಐಎಎಫ್ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಅವಶೇಷಗಳ ಪತ್ತೆಯಾಗದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು ಭಾರತೀಯ ನೌಕಪಡೆ, ಕರಾವಳಿ ಪಡೆ ಜಂಟಿಯಾಗಿ ಪತ್ತೆಕಾರ್ಯವನ್ನು ಮುಂದುವರೆಸಿವೆ.