ಸಾವಿನಲ್ಲೂ ರಾಜಣ್ಣನ ಆದರ್ಶ ಪಾಲನೆ; ಪಾರ್ವತಮ್ಮ ನೇತ್ರದಾನ

By Suvarna Web DeskFirst Published May 31, 2017, 11:14 AM IST
Highlights

78 ವರ್ಷದ ಪಾರ್ವತಮ್ಮ ನೇತ್ರ ದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯಕ್ಕೆ ತಮ್ಮೆರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ದೊಡ್ಮನೆ ಅಮ್ಮ ನಿಧನದ ನಂತರ ನಾರಾಯಣ ನೇತ್ರಾಲಯದ ವೈದ್ಯ ಡಾ. ಭುಜಂಗಶೆಟ್ಟಿಯವರು ಸದಾಶಿವನಗರದಲ್ಲಿರುವ ರಾಜ್ ನಿವಾಸಕ್ಕೆ ತೆರಳಿ ಕಣ್ಣುಗಳನ್ನು ಪಡೆದಿದ್ದಾರೆ.

ಬೆಂಗಳೂರು(ಮೇ 31): ಪಾರ್ವತಮ್ಮ ವಿಧಿವಶರಾಗಿದ್ದಾರೆ. ಪತಿ ರಾಜಕುಮಾರ್ ಅವರನ್ನ ಇಹಲೋಕದಲ್ಲಿ ಲೀನವಾಗಿದ್ದಾರೆ. 11 ವರ್ಷಗಳ ಹಿಂದೆ ಡಾ. ರಾಜಕುಮಾರ್ ನಿಧನರಾದಾಗ ತಮ್ಮ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದರು. ಈಗ ಅವರ ಪತ್ನಿ ಡಾ. ಪಾರ್ವತಮ್ಮ ರಾಜಕುಮಾರ್ ಕೂಡ ಅದೇ ಹಾದಿ ತುಳಿದು ತಮ್ಮ ಪತಿಯ ಆದರ್ಶವನ್ನು ಅಕ್ಷರಶಃ ಪಾಲಿಸಿದ್ದಾರೆ. 78 ವರ್ಷದ ಪಾರ್ವತಮ್ಮ ನೇತ್ರ ದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯಕ್ಕೆ ತಮ್ಮೆರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ದೊಡ್ಮನೆ ಅಮ್ಮ ನಿಧನದ ನಂತರ ನಾರಾಯಣ ನೇತ್ರಾಲಯದ ವೈದ್ಯ ಡಾ. ಭುಜಂಗಶೆಟ್ಟಿಯವರು ಸದಾಶಿವನಗರದಲ್ಲಿರುವ ರಾಜ್ ನಿವಾಸಕ್ಕೆ ತೆರಳಿ ಕಣ್ಣುಗಳನ್ನು ಪಡೆದಿದ್ದಾರೆ.

ಡಾ. ಪಾರ್ವತಮ್ಮ ರಾಜಕುಮಾರ್ ಬಹುಅಂಗಾಂಗ ವೈಫಲ್ಯದಿಂದ ಇಂದು ಬುಧವಾರ ಬೆಳಗ್ಗೆ 4:40ಕ್ಕೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೇ 14ರಿಂದ ಆಸ್ಪತ್ರೆಯಲ್ಲಿ ಪಾರ್ವತಮ್ಮ ಜೀವನ್ಮರಣ ಹೋರಾಟದಲ್ಲೇ ಇದ್ದರು.

click me!