ನಾಳೆ ಭಾಗಶಃ ಸೂರ್ಯ ಗ್ರಹಣ: ಭಾರತೀಯರು ಕೂಡ ವೀಕ್ಷಿಸಬಹುದು !

By Suvaran web DeskFirst Published Feb 14, 2018, 7:39 PM IST
Highlights

ಭಾರತದ ಸಮಯದಲ್ಲಿ ಇದು ಆರಂಭಗೊಳ್ಳುವುದು ಫೆ.16 ರಂದು ಮುಂಜಾನೆ 12.25ರಿಂದ ಆರಂಭವಾಗಿ ಮುಂಜಾನೆ 4.17ಕ್ಕೆ ಮುಕ್ತಾಯಗೊಳ್ಳುತ್ತದೆ.

ನವದೆಹಲಿ(ಫೆ.14): ಇತ್ತೀಚಿಗಷ್ಟೆ ಜನವರಿ 31ರಂದು ಗೋಚರಗೊಂಡ ಕೆಂಪು ಚಂದ್ರಗಹಣವನ್ನು ಭಾರತವು ಒಳಗೊಂಡು ವಿಶ್ವದಾದ್ಯಂತ ಹಲವು ದೇಶಗಳ ಜನರು ಬರಿಗಣ್ಣಿನಿಂದಲೇ ವೀಕ್ಷಿಸಿ ಖುಷಿಗೊಂಡರು.

ನಾಳೆ(ಫೆ.15) ಭಾಗಶಃ ಸೂರ್ಯ ಗ್ರಹಣ ಗೋಚರಿಸಲಿದ್ದು. ಈ ವರ್ಷದ ಮೊದಲ ಗ್ರಹಣವಾಗಿದೆ. ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ದಕ್ಷಿಣ ಅಮೆರಿಕಾದ ದಕ್ಷಿಣ ಭಾಗದಲ್ಲಿನ ಅರ್ಜೇಂಟೈನಾ, ಚಿಲಿ, ಪೆರುಗ್ವೆ, ಉರುಗ್ವೆ ಹಾಗೂ ಅಂಟಾರ್ಟಿಕಾ ಖಂಡದಲ್ಲಿ ಮಾತ್ರ ಗೋಚರಿಸಲಿದೆ.

ಭಾರತದಲ್ಲಿ ಗೋಚರಿಸದಿದ್ದರೂ ಭಾರತೀಯರು ನಾಸಾ ವೆಬ್'ಸೈ'ಟ್'ನ ಲೈವ್ ಸ್ಟ್ರೀಮಿಂಗ್'ನಲ್ಲಿ, ಯೂಟ್ಯೂಬ್ ಮತ್ತು ಪೆರಿಸ್ಕೋಪ್'ನಲ್ಲಿ ಆರಾಮಾಗಿ ವೀಕ್ಷಿಸಬಹುದು. ಅಪಾಯಕಾರಿಯಾದ ಗ್ರಹಣವಾದ ಕಾರಣ ಬರಿಗಣ್ಣಿನಲ್ಲಿ ವೀಕ್ಷಿಸಿದರೆ ಕಣ್ಣು ಕಳೆದುಕೊಳ್ಳುವ ಅಪಾಯವಿದೆ.

ಗ್ರಹಣದ ಸಮಯ

ಗ್ರಹಣ ಗೋಚರಿಸುವ ದೇಶಗಳಲ್ಲಿ ಸಂಜೆ  6.55ಕ್ಕೆ ಆರಂಭಗೊಂಡು  10.47ಕ್ಕೆ ಮುಕ್ತಾಯವಾಗುತ್ತದೆ. ಭಾರತದ ಸಮಯದಲ್ಲಿ ಇದು ಆರಂಭಗೊಳ್ಳುವುದು ಫೆ.16 ರಂದು ಮುಂಜಾನೆ 12.25ರಿಂದ ಆರಂಭವಾಗಿ ಮುಂಜಾನೆ 4.17ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ವರ್ಷದ ಮುಂದಿನ ಗ್ರಹಣಗಳು ಸಂಭವಿಸುವುದು ಜು.18 ಹಾಗೂ ಆಗಸ್ಟ್ 11 ರಂದು. ಆದರೆ ಇವೆರಡೂ ಭಾರತದಲ್ಲಿ ಕಾಣಿಸುವುದಿಲ್ಲ.

click me!