ಮೋದಿ ರಫೇಲ್ ಡೀಲ್ ಬದಲಿಸಿದ್ದು ರಕ್ಷಣಾ ಸಚಿವರಿಗೆನೇ ಗೊತ್ತಿರಲಿಲ್ಲ: ರಾಹುಲ್

By Suvarna Web DeskFirst Published Feb 26, 2018, 10:26 PM IST
Highlights
  • ಮೋದಿ ಆ ಕಡೆ ರಫೇಲ್ ಡೀಲನ್ನು ಬದಲಿಸುತ್ತಿರುವಾಗ, ಪರ್ರಿಕರ್ ಗೋವಾದಲ್ಲಿ ‘ಮೀನು ಖರೀದಿಸುತ್ತಿದ್ದರು’!
  • ರಫೇಲ್ ಡೀಲ್ ಬಗ್ಗೆ ಹಾಲಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ತಮ್ಮ ನಿಲುವನ್ನು ಬದಲಾಯಿಸಿದ್ದೇಕೆ?

ಸವದತ್ತಿ, ಬೆಳಗಾವಿ: ಪ್ರಧಾನಿ ಮೋದಿ ರಫೇಲ್ ಡೀಲ್ ಬದಲಿಸಿದ್ದು ಆಗಿನ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರಿಗೆನೇ ಗೊತ್ತಿರಲಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಜನಾಶಿರ್ವಾದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಆ ಕಡೆ ರಫೇಲ್ ಡೀಲನ್ನು ಬದಲಿಸುತ್ತಿರುವಾಗ, ಪರ್ರಿಕರ್ ಗೋವಾದಲ್ಲಿ ‘ಮೀನು ಖರೀದಿಸುತ್ತಿದ್ದರು’ ಎಂದು ಟೀಕಿಸಿದ್ದಾರೆ.

ರಫೇಲ್ ಡೀಲ್ ಬಗ್ಗೆ ಹಾಲಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ತಮ್ಮ ನಿಲುವನ್ನು ಏಕೆ ಬದಲಾಯಿಸಿದ್ದಾರೆ ಎಂದು ಪ್ರಶ್ನಿಸಿ ರಾಹುಲ್ ಈ ಹಿಂದೆ ಟ್ವೀಟ್ ಕೂಡಾ ಮಾಡಿದ್ದರು.

ರಫೇಲ್ ಯುದ್ಧ ವಿಮಾನಗಳ ಬೆಲೆಯನ್ನು ತಾನು ಬಹಿರಂಗಪಡಿಸುವುದಾಗಿ ಕಳೆದ ನವೆಂಬರ್’ನಲ್ಲಿ ಹೇಳಿಕೆ ನೀಡಿದ್ದ ನಿರ್ಮಲಾ ಸೀತರಾಮನ್, ‘ಅದು ಗೌಪ್ಯ ವಿಷಯ’ ಎಂದು ಫೆಬ್ರವರಿಯಲ್ಲಿ ತಮ್ಮ ನಿಲುವನ್ನು ಯಾಕೆ ಬದಲಾಯಿಸಿದ್ದಾರೆ? ಎಂದು ರಾಹುಲ್ ಪ್ರಶ್ನಿಸಿದ್ದರು.  ಬಳಿಕ  ಉತ್ತರಗಳಿಗೆ ಈ ಆಯ್ಕೆಗಳನ್ನು ನೀಡಿದ್ದರು.

  • ಭ್ರಷ್ಟಾಚಾರ
  • ಮೋದಿಯವರ ರಕ್ಷಣೆಗೆ
  • ಮೋದಿಯವರ ಸ್ನೇಹಿತನ ರಕ್ಷಣೆಗೆ

Q. Why did the Raksha Mantri change her stance from :
I will reveal the price of the RAFALE planes in Nov 2017 to the price is a state secret in Feb 2018

A. Corruption
B. To protect Modiji
C. To protect Modiji's friend
D. All of above

— Office of RG (@OfficeOfRG)

 

click me!