ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿದ್ದಕ್ಕೆ ಸಿಎಂ ಮೇಲೆ ಅಸಮಾಧಾನ; ಮೌನಕ್ಕೆ ಶರಣಾದ ಪರಂ

Published : Sep 02, 2017, 10:09 PM ISTUpdated : Apr 11, 2018, 12:57 PM IST
ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿದ್ದಕ್ಕೆ ಸಿಎಂ ಮೇಲೆ ಅಸಮಾಧಾನ; ಮೌನಕ್ಕೆ ಶರಣಾದ ಪರಂ

ಸಾರಾಂಶ

ನಿನ್ನೆ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್​ ಅಸಮಾಧಾನದ ಹೊಗೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮೌನಕ್ಕೆ ಶರಣಾಗಿದ್ದಾರೆ.

ಬೆಂಗಳೂರು (ಸೆ.01): ನಿನ್ನೆ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್​ ಅಸಮಾಧಾನದ ಹೊಗೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮೌನಕ್ಕೆ ಶರಣಾಗಿದ್ದಾರೆ.

ನಿನ್ನೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಿರುವ ಪರಮೇಶ್ವರ್, ಕೆಪಿಸಿಸಿ ಕಚೇರಿಗೂ ಹೋಗದೇ, ನಿವಾಸದಿಂದ ಹೊರಗೂ ಬರದೇ ಮೌನ ವಹಿಸಿದ್ದಾರೆ. ಮನೆ ಮನೆಗೆ ಕಾಂಗ್ರೆಸ್ ನಡಿಗೆ ಹೆಸರಲ್ಲಿ ಪಕ್ಷ ಸಂಘಟನೆ ಮಾಡೋದು ನಾವು. ಆದ್ರೆ ಸರ್ಕಾರದ ನಿರ್ಧಾರಗಳಲ್ಲಿ ಪಕ್ಷವನ್ನು ಪರಿಗಣಿಸಲ್ಲ ಅಂದ್ರೆ ಹೇಗೆ? ಸಮನ್ವಯ ಸಮಿತಿಯ ಗಮನಕ್ಕೂ ತರದೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಅಂತ ಪರಮೇಶ್ವರ್ ಗರಂ ಆಗಿದ್ದಾರೆ. ಅಸಮಧಾನದ ಬಗ್ಗೆ  ಪರಮೇಶ್ವರ್ ತಮ್ಮ ಅತ್ಯಾಪ್ತರ ಹತ್ತಿರ ಹೇಳಿಕೊಂಡಿದ್ದಾರೆ ಎಂಬ ಎಕ್ಸ್​ಕ್ಲೂಸಿವ್  ಅಂಶಗಳು ಸುವರ್ಣ ನ್ಯೂಸ್​ಗೆ ಲಭ್ಯವಾಗಿವೆ.
ಸಿದ್ದರಾಮಯ್ಯರಿಂದ ಮೂಲ ಕಾಂಗ್ರೆಸ್ಸಿಗರ ಕಡೆಗಣನೆಗೆ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.  ಸಿಎಂ ಹೀಗೆ ಮುಂದುವರೆದರೆ ಮೂಲ ಕಾಂಗ್ರೆಸ್ಸಿಗರಿಗೆ ಉತ್ತರಿಸೋದು ಹೇಗೆ? ಪಕ್ಷದ ಅಧ್ಯಕ್ಷರ ಜೊತೆ ಯಾವುದೇ ವಿಚಾರಗಳ ಬಗ್ಗೆ ಚರ್ಚೆ ಮಾಡಲ್ಲ ಅಂದ್ರೆ ಹೇಗೆ? ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆಗೆ ಸಮನ್ವಯ ಸಮಿತಿ ಕೂಡಾ ಇದೆ. ಸಮನ್ವಯ ಸಮಿತಿಯ ಗಮನಕ್ಕೂ ತರದೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿಎಂ ನಡೆಯ ಬಗ್ಗೆ ಆಪ್ತರ ಬಳಿ ಪರಮೇಶ್ವರ್ ಅಸಮಾಧಾನ ತೋಡಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌
ಖರ್ಗೆ ಪ್ರಧಾನಿ ಆಗಲಿಲ್ಲ, ನಾನು ಮಂತ್ರಿ ಆಗಲಿಲ್ಲ, ನೋವು ತೋಡಿಕೊಂಡ ಬಸವರಾಜ ರಾಯರೆಡ್ಡಿ