
ನವದೆಹಲಿ(ಸೆ.02): ನಾಳೆ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜ್ಯದಿಂದ ಮಂತ್ರಿಯಾಗ ಬಯಸಿದ್ದ ಸಂಸದರಿಗೆ ಶಾಕ್ ಆಗಿದ್ದಾರೆ. ರಾಜ್ಯದ ಕೋಟದಿಂದ ಕೇಂದ್ರದಲ್ಲಿ 3 ಅಥವಾ 4 ಮಂದಿ ಮಂತ್ರಿಯಾಗ ಬಯಸಿದ್ದವರ ಆಸೆ ನಿರಾಸೆಯಾಗಿದ್ದು, ಹೆಸರೆ ಇಲ್ಲದ ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ದೊರಯಲಿದೆ.
ನಾಳೆ ಬೆಳಿಗ್ಗೆ 10.30ಕ್ಕೆ ಒಟ್ಟು 9 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಕೇಂದ್ರ ಸಚಿವರಾಗಲಿದ್ದಾರೆ. ಇನ್ನುಳಿದಂತೆ ವಿವಿಧ ರಾಜ್ಯದಿಂದ ಶಿವಪ್ರಸಾದ್, ಸತ್ಯಪಾಲ್ ಸಿಂಗ್, ಅಶ್ವಿನಿ ಕುಮಾರ್ ಚೌಬೆ, ವೀರೇಂದ್ರ ಕುಮಾರ್, ಹರ್ದೀಪ್ ಸಿಂಗ್ ಪುರಿ, ಗಜೇಂದ್ರ ಸಿಂಗ್ ಜಿ. ಶೇಖಾವತ್ ಹಾಗೂ ರಾಜ್ಕುಮಾರ್ ಸಿಂಗ್ ಮಂತ್ರಿ ಸ್ಥಾನ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.