ಪನಾಮ ಪ್ರಕರಣ: ವಿಚಾರಣೆ 4 ವಾರಗಳಿಗೆ ಮುಂದೂಡಿಕೆ

By Suvarna Web DeskFirst Published Jan 9, 2017, 11:16 AM IST
Highlights

ಪನಾಮಾ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಸೆಬಿ ಹೆಚ್ಚಿನ ಸಮಯ ಕೋರಿರುವುದನ್ನು ಪರಿಗಣಿಸಿ ಸುಪ್ರೀಂಕೋರ್ಟ್ ವಿಚಾರಣೆಯನ್ನು 4 ವಾರಗಳಿಗೆ ಮುಂದೂಡಿದೆ.

ನವದೆಹಲಿ (ಜ.09): ಪನಾಮಾ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಸೆಬಿ ಹೆಚ್ಚಿನ ಸಮಯ ಕೋರಿರುವುದನ್ನು ಪರಿಗಣಿಸಿ ಸುಪ್ರೀಂಕೋರ್ಟ್ ವಿಚಾರಣೆಯನ್ನು 4 ವಾರಗಳಿಗೆ ಮುಂದೂಡಿದೆ.

ಸಿಬಿಐ ನಡೆಸುತ್ತಿರುವ ತನಿಖೆಯ ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ಅಧ್ಯಕ್ಷೀಯ ಪೀಠ ವಿಚಾರಣೆಯನ್ನು ನಾಲ್ಕು ವಾರಕ್ಕೆ ಮುಂದೂಡಿದೆ. ಪನಾಮಾ ಹಗರಣದಲ್ಲಿ ಭಾರತೀಯ ಉದ್ಯಮಿಗಳು, ಸೆಲೆಬ್ರಿಟಿಗಳ ಹೆಸರು ಕೇಳಿ ಬಂದಿದೆ.

ಸಾಗರೋತ್ತರದಲ್ಲಿ ಖಾತೆಯನ್ನು ಹೊಂದಿರುವ ಭಾರತೀಯ ುದ್ಯಮಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ನ್ಯಾಯವಾದಿ ಮನೋಹರ್ ಲಾಲ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.  

click me!