
ನವದೆಹಲಿ(ಮೇ.19): ಅಂತಾರಾಷ್ಟ್ರೀಯ ಕೋರ್ಟ್'ನಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಜಾಧವ್ ಪರ ವಾದ ಮಾಡಿದ್ದ ಭಾರತದ ಖ್ಯಾತ ವಕೀಲ ಹರೀಶ್ ಸಾಳ್ವೆ ಕೇವಲ 1 ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ. ಆದರೆ, ಐಸಿಜೆನಲ್ಲಿ ವಾದ ಮಂಡಿಸಲು ಪಾಕಿಸ್ತಾನ ತನ್ನ ವಕೀಲರಿಗೆ ನೀಡಿದ ಸಂಭಾವನೆ ಬರೋಬ್ಬರಿ 5 ಕೋಟಿ ರೂ. ಎನ್ನುವ ಮಾಹಿತಿ ಬಯಲಾಗಿದೆ.
ಜಾಧವ್ ತೀರ್ಪು ಹೊರಬಿದ್ದ ನಂತರ ಪಾಕಿಸ್ತಾನ ಮಾಧ್ಯಮದಲ್ಲಿ ತೀರ್ಪಿನ ಕುರಿತು ಭಾರಿ ಚರ್ಚೆ ಆಗಿದೆ. ಅಲ್ಪ ತಯಾರಿ ಹಾಗೂ ದುರ್ಬಲ ವಾದ ಮಂಡನೆ ಮಾಡಲಾಗಿದೆ ಎಂದು ಪಾಕ್ ಸರ್ಕಾರವನ್ನು ಅಲ್ಲಿನ ಮಾಧ್ಯಮಗಳು ತರಾಟೆಗೆ ತೆಗೆದುಕೊಂಡಿವೆ. ಜಾಧವ್ ಗಲ್ಲು ಶಿಕ್ಷೆ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆಯೇ ಭಾರತ ಐಸಿಜೆ ಮೊರೆ ಹೋಗಲು ತಯಾರಿ ನಡೆಸಿತ್ತು. ಆದರೆ, ಪಾಕಿಸ್ತಾನ ಬೆರಳಣಿಕೆಯ ದಿನಗಳಲ್ಲಿ ಕಾಗದ ಪತ್ರಗಳನ್ನು ಒಟ್ಟುಗೂಡಿಸಿಕೊಂಡು ನ್ಯಾಯಾಲಯ ತಲುಪಿದೆ. ಪಾಕಿಸ್ತಾನ ಕೇವಲ ಗಲ್ಲು ಶಿಕ್ಷೆಯ ತೀರ್ಪು ಪ್ರಕಟಿಸಿ ತೃಪ್ತಿ ಹೊಂದಿದಂತೆ ಕಾಣುತ್ತಿದೆ. ಭಾರತ ಏನು ಮಾಡಬಹುದು ಎಂಬುದನ್ನು ಕೂಡ ಯೋಚಿಸಲಿಲ್ಲ ಎಂದು ಮಾಧ್ಯಮವೊಂದಕ್ಕೆ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ, ಜಾಧವ್ ನಮ್ಮ ದೇಶದ ಪುತ್ರ. ಆತನನ್ನು ಮರಳಿ ತರುವ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಘೋಷಿಸಿದಾಗ ಪಾಕಿಸ್ತಾನ ಎಚ್ಚೆತ್ತುಕೊಳ್ಳಲಿಲ್ಲವೇಕೆ? ಎಂದು ಅವರು ಪ್ರಶ್ನಿಸಿದ್ದಾರೆ. ಪಾಕ್ ತನ್ನ ವಕೀಲರಿಗೆ 5 ಕೋಟಿ ರೂ. ನೀಡಿದರೆ, ಭಾರತ ಕೇವಲ 1 ರೂ. ನೀಡಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.