
ನವದೆಹಲಿ(ಏ.15): ಭಾರತೀಯ ನೌಕಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಯಾದವ್ ಅವರನ್ನು ಗಲ್ಲು ಶಿಕ್ಷೆ ವಿಧಿಸಿದ ನಂತರ ಮತ್ತೆ ಮೂವರು ಗುಪ್ತಚರ ಇಲಾಖೆ(ರಾ)ಯ ಮೂವರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿಕೊಂಡಿದೆ.
ಮೊಹಮದ್ ಖಲೀಲ್,ಇಮ್ತಿಯಾಜ್ ಹಾಗೂ ರಶೀದ್ ಎಂಬುವವರನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಂಧಿಸಲಾಗಿದೆ. ಬಂಧಿತರೆಲ್ಲರೂ ಅಬ್ಬಾಸ್'ಪುರದ ತರೋಟಿ ಗ್ರಾಮದವರಾಗಿದ್ದಾರೆ. ಇವರೆಲ್ಲರೂ ಪಾಕ್ ವಿರುದ್ಧ ದೇಶ ದ್ರೋಹ ಚಟುವಟಿಕೆ ಕೆಲಸ ಮಾಡುತ್ತಿದ್ದ ಕಾರಣ ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ ಎಂದು ಪಾಕ್ ಮಾಧ್ಯಮ ಡಾನ್ ವರದಿ ಮಾಡಿದೆ.
ಈ ಮೂವರು ಭಾರತೀಯ ಗುಪ್ತಚರ ಸಂಸ್ಥೆಯಾದ ಸಂಶೋಧನೆ ಮತ್ತು ವಿಶ್ಲೇಷಣೆ ದಳದಿಂದ ನೇಮಕವಾಗಿದ್ದು, ಜೊತೆಗೆ ಸದಾ ಸಂಪರ್ಕ ಹೊಂದಿರುತ್ತಿದ್ದರು. ಪ್ರಮುಖ ಆರೋಪಿ ಖಲೀಲ್ ಈ ಪ್ರಾಂತ್ಯದ ಪೊಲೀಸ್ ಠಾಣೆಯ ಸ್ಫೋಟದಲ್ಲಿ ಭಾಗಿಯಾಗಿದ್ದ. 2 ವರ್ಷಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಗಡಿಯನ್ನು 15ಕ್ಕೂ ಹೆಚ್ಚು ಬಾರಿ ದಾಟಿದ್ದಾನೆ.
ಪಾಕ್'ನ ಸರ್ಕಾರಿ ಕಟ್ಟಡಗಳನ್ನು ಕೆಡವಲು ರಾ ಅಧಿಕಾರಿಗಳಿಂದ 5 ಲಕ್ಷ ಪಡೆದಿದ್ದ. ಇನ್ನುಳಿದ ಇಬ್ಬರು ಆರೋಪಿಗಳು 1.5 ಹಾಗೂ 50 ಸಾವಿರ ಪಡೆದಿದ್ದಾರೆ. ಮೂವರನ್ನು ಭಯೋತ್ಪಾದನ ವಿರೋಧಿ ಕಾಯಿದೆ ಹಾಗೂ ಸ್ಫೋಟಕ ಕಾಯಿದೆಯಡಿ ಬಂಧಿಸಲಾಗಿದೆ' ಎಂದು ಪೂಂಚ್ ಜಿಲ್ಲೆಯ ಡಿಎಸ್'ಪಿ ಸಜ್ಜದ್ ಇಮ್ರಾನ್ ತಿಳಿಸಿದ್ದಾರೆ ಎಂದು ವರದಿ ಮಾಡಲಾ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.