ನಿತ್ಯವೂ ಪಾಕ್'ನಿಂದ ಕದನ ವಿರಾಮ ಉಲ್ಲಂಘನೆ : ಗೃಹ ಸಚಿವಾಲಯ

By Suvarna Web DeskFirst Published May 7, 2017, 1:03 PM IST
Highlights

2012 ರಿಂದ 2016ರವರೆಗೆ 1142 ಭಯೋತ್ಪಾದನಾ ಘಟನೆಗಳು ವರದಿಯಾಗಿದ್ದು,236 ಮಂದಿ ಭದ್ರತಾ ಸಿಬ್ಬಂದಿ ಹಾಗೂ 90 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ನವದೆಹಲಿ(ಮೇ.07): ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರ'ದ ಗಡಿ ನಿಯತ್ರಣ ರೇಖೆಯಲ್ಲಿ 2015 ಹಾಗೂ 2016ರಲ್ಲಿ ಪ್ರತಿ ದಿನವೂ ಕದನ ವಿರಾಮ ಉಲ್ಲಂಘನೆಯಾಗುತ್ತಿತ್ತು ಎಂದು ಗೃಹ ಸಚಿವಾಲಯ ತಿಳಿಸಿದೆ.

ಆರ್'ಟಿಐನಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವಾಲಯ, 2 ವರ್ಷಗಳಲ್ಲಿ 23 ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.2012 ರಿಂದ 2016ರವರೆಗೆ 1142 ಭಯೋತ್ಪಾದನಾ ಘಟನೆಗಳು ವರದಿಯಾಗಿದ್ದು,236 ಮಂದಿ ಭದ್ರತಾ ಸಿಬ್ಬಂದಿ ಹಾಗೂ 90 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ಅಲ್ಲದೆ ಇದೇ ಅವಧಿಯಲ್ಲಿ 507 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಪಿಟಿಐ'ನ ಬಾತ್ಮಿದಾರರಾದ ಬಾಷಾ ಅವರು ಆರ್'ಟಿಐನಡಿ ಕೇಳಿದ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ.

click me!