ವರ್ಲ್ಡ್‌ಕಪ್ ಹೊತ್ತು ತಂದಿದ್ದೇನೆ: ಅಮೆರಿಕ ಪ್ರವಾಸ ಬಣ್ಣಿಸಿದ ಇಮ್ರಾನ್

By Web DeskFirst Published Jul 25, 2019, 5:31 PM IST
Highlights

ಅಮೆರಿಕದಿಂದ ವರ್ಲ್ಡ್‌ಕಪ್ ಹೊತ್ತು ತಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್| ಅಮೆರಿಕ ಪ್ರವಾಸವನ್ನು ಫಲಪ್ರದ ಎಂದು ಬಣ್ಣಿಸಿರುವ ಪಾಕ್ ಪ್ರಧಾನಿ| ‘ಅಮೆರಿಕದಿಂದ ವಾಪಸ್ಸಾಗಿರುವುದು ವಿಶ್ವಕಪ್ ಗೆದ್ದು ಸ್ವದೇಶಕ್ಕೆ ಮರಳಿದಂತೆ ಭಾಸವಾಗುತ್ತಿದೆ’|  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗೆ ಇಮ್ರಾನ್ ಮಹತ್ವದ ಮಾತುಕತೆ|

ಇಸ್ಲಾಮಾಬಾದ್(ಜು.25): ತಮ್ಮ ಅಮೆರಿಕ ಪ್ರವಾಸವನ್ನು ಫಲಪ್ರದ ಎಂದು ಬಣ್ಣಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಮೆರಿಕದಿಂದ ವಾಪಸ್ಸಾಗಿರುವುದು ವಿಶ್ವಕಪ್ ಗೆದ್ದು ಸ್ವದೇಶಕ್ಕೆ ಮರಳಿದಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ.

ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದ ಇಮ್ರಾನ್ ಖಾನ್, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದರು. ಅಲ್ಲದೇ ಉಭಯ ದೇಶಗಳು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದವು.

ಅಮೆರಿಕದ ಭೇಟಿಯನ್ನು ತಮ್ಮದೇ ಶೈಲಿಯಲ್ಲಿ ಬಣ್ಣಿಸಿರುವ ಇಮ್ರಾನ್ ಖಾನ್, ತಮ್ಮ ಅತ್ಯಂತ ಯಶಸ್ವಿ ಪ್ರವಾಸವನ್ನು, 1991ರಲ್ಲಿ ತಮ್ಮ ನಾಯಕತ್ವದಲ್ಲಿ ಪಾಕಿಸ್ತಾನ ವಿಶ್ವಕಪ್ ಗೆದ್ದ ಘಟನೆಗೆ ಹೋಲಿಕೆ ಮಾಡಿದ್ದಾರೆ.

ಅಮೆರಿಕದಿಂದ ವಾಪಸ್ಸಾಗುತ್ತಿರುವುದು ವಿಶ್ವಕಪ್ ಹೊತ್ತು ಸ್ವದೇಶಕ್ಕೆ ಮರಳಿದ ದಿನಗಳನ್ನು ನೆನಪಿಸುತ್ತಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

click me!