ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯೊಂದಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫುಲ್ ಗರಂ ಆಗಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಆಡಿದ್ದ ಮಾತುಗಳು ಇಮ್ರಾನ್ ಕೋಪಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಟ್ರಂಪ್ ಹೇಳಿದ್ದೇನು..? ಇಮ್ರಾನ್ ಖಾನ್ ಗರಂ ಆಗಿದ್ದೇಕೆ ಎಂದು ತಿಳಿಯಲು ಈ ಸುದ್ದಿ ಓದಿ.
ನ್ಯೂಯಾರ್ಕ್(ಸೆ.24): ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯೊಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೋಪಕ್ಕೆ ಕಾರಣವಾಗಿದೆ. ಟ್ರಂಪ್ ನೀಡಿರುವ ಹೇಳಿಕೆಗೆ ಫುಲ್ ಗರಂ ಆಗಿರೋ ಪಾಕ್ ಪ್ರಧಾನಿ ಮಾತಿನ ತಿರುಗೇಟು ನೀಡಿದ್ದಾರೆ.
ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದನೆ ಮಟ್ಟಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆಕ್ಷೇಪ
ವ್ಯಕ್ತಪಡಿಸಿದ್ದಾರೆ.
ಸೆ.26, 27 ಕ್ಕೆ ಬ್ಯಾಂಕ್ ನೌಕರರ ಮುಷ್ಕರವಿಲ್ಲ
ಹೌಡಿ ಮೋದಿ ಕಾರ್ಯಕ್ರಮ ದಲ್ಲಿ ಟ್ರಂಪ್ ಆಡಿದ್ದ ಮಾತು ಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಇಮ್ರಾನ್, ‘ಇಡೀ ಪ್ರಪಂಚದಲ್ಲಿ ಇರುವುದು ಒಂದೇ ಇಸ್ಲಾಂ. ಜನತೆಯ ಶಾಂತಿ ಮತ್ತು ನ್ಯಾಯದ ಬಗ್ಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಬೋಧನೆ ಮಾಡಿದ ಏಕ ಮಾತ್ರ ಇಸ್ಲಾಂ ಧರ್ಮವಿದೆ. ಉಳಿದಂತೆ ಮಂದಗಾಮಿ ಅಥವಾ ಮೂಲಭೂತ ವಾದಿ ಇಸ್ಲಾಂ ಧರ್ಮ ಇಲ್ಲ ಎಂದಿದ್ದಾರೆ.
ಶಬರಿಮಲೆ ಅಯ್ಯಪ್ಪ ಸನ್ನಿಧಿ ಪ್ರಸಾದಕ್ಕಿನ್ನು ಪೇಟೆಂಟ್!