
ಇಸ್ಲಾಮಾಬಾದ್[ಏ.15]: ಪುಲ್ವಾಮಾ ಉಗ್ರದಾಳಿ ನಂತರದಲ್ಲಿ ಭಾರತ-ಪಾಕ್‌ನ ಬಾಂಧವ್ಯದಲ್ಲಿ ಉಂಟಾಗಿದ್ದ ವೈಮಸ್ಸಿನ ಮಧ್ಯೆಯೂ ‘ಉತ್ತಮ ನಡತೆಯ’ ತೋರಿದ 100 ಮೀನುಗಾರರನ್ನು ಪಾಕಿಸ್ತಾನ ಶನಿವಾರ ಬಿಡುಗಡೆ ಮಾಡಿದೆ.
ಇವರನ್ನು ಕರಾಚಿಯ ಮಾಲಿರ್ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಇವರೆಲ್ಲಾ ರೈಲು ಮೂಲಕ ಲಾಹೋರ್ ಮಾರ್ಗವಾಗಿ ವಾಘಾ ಗಡಿಗೆ ಬಂದು, ಅಲ್ಲಿಂದ ತಾಯ್ನಾಡಿಗೆ ಹೆಜ್ಜೆ ಇಡಲಿದ್ದಾರೆ. ಒಟ್ಟು 360 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಪಾಕ್ ನಿರ್ಧರಿಸಿದ್ದು, ಈ ಪೈಕಿ ಇದುವರೆಗೆ 200 ಜನರನ್ನು ಬಿಡುಗಡೆ ಮಾಡಿದಂತೆ ಆಗಿದೆ.
ಉಳಿದವರನ್ನು ಇದೇ ತಿಂಗಳಲ್ಲಿ ಇನ್ನೂ 2 ಹಂತದಲ್ಲಿ ಬಿಡುಗಡೆ ಮಾಡಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.