
ಮುಂಬೈ(ಜು.19): ಮ್ಯಾಟ್ರಿಮೋನಿಯಲ್ ಸೈಟ್‌ವೊಂದರಲ್ಲಿ ಪಾಕ್ ಪ್ರಜೆಯೊಬ್ಬ ತಾನು ನಾಗ್ಪುರದ ವ್ಯಕ್ತಿ ಎಂದು ಸುಳ್ಳು ಹೇಳಿ ಮುಂಬೈ ಮೂಲದ ಯುವತಿಗೆ ಮದುವೆ ಪ್ರಪೋಸಲ್ ಇಟ್ಟಿರುವ ಘಟನೆ ನಡೆದಿದೆ. ತಾನು ನಾಗ್ಪುರದ ನಿವಾಸಿಯಾಗಿದ್ದು, ಲಂಡನ್‌ನಲ್ಲಿ ವೈದ್ಯನಾಗಿರುವುದಾಗಿ ಸುಳ್ಳು ಹೇಳಿರುವ ಈತ, ಸದ್ಯದಲ್ಲೇ ಭಾರತಕ್ಕೆ ಮರಳಿ ಬಂದು ನೆಲೆಸುವುದಾಗಿ ಹೇಳಿಕೊಂಡಿದ್ದ.
ಈತನ ಹಿನ್ನೆಲೆ ಕುರಿತು ಮತ್ತಷ್ಟು ಮಾಹಿತಿ ಪಡೆಯಲು ಬಯಸಿದ ಯುವತಿ, ಆತ ಹೇಳಿದ ಲಂಡನ್‌ನ ಆಸ್ಪತ್ರೆಗೆ ಕರೆ ಮಾಡಿ ವಿಚಾರಿಸಿದಾಗ ಆತ ಅಲ್ಲಿನ ಉದ್ಯೋಗಿ ಅಲ್ಲ ಎಂಬುದು ಗೊತ್ತಾಗಿದೆ. ಅಲ್ಲದೇ ಆತ ವಾಟ್ಸಪ್ ಮೂಲಕ ಕಳುಹಿಸಿದ್ದ ಫೋಟೋಗಳ ಕುರಿತು ವಿಚಾರಣೆ ನಡೆಸಿದಾಗ ಆತನ ಗೆಳೆಯನಿಂದ ಆತ ಪಾಕಿಸ್ತಾನಿ ಪ್ರಜೆ ಎಂಬ ಮಾಹಿತಿ ಗೊತ್ತಾಗಿದೆ. ಅಷ್ಟೇ ಅಲ್ಲದೇ ಆತನಿಗೆ ಈಗಾಗಲೇ ಮದುವೆಯಾಗಿ ಮೂವರು ಮಕ್ಕಳು ಕೂಡ ಇದ್ದಾರೆ ಎಂಬ ಆಘಾತಕಾರಿ ಅಂಶ ಕೂಡ ಬೆಳಕಿಗೆ ಬಂದಿದೆ.
ಇಷ್ಟೇ ಅಲ್ಲದೇ ಈ ಪಾಕಿಸ್ತಾನಿ ಪ್ರಜೆ ಈ ಹಿಂದೆಯೂ ಹಲವು ಯುವತಿಯರಿಗೆ ಇದೇ ರೀತಿ ಮೋಸ ಮಾಡಿರುವ ಅಂಶ ಕೂಡ ಬೆಳಕಿಗೆ ಬಂದಿದೆ. ಈ ಕುರಿತು ಯುವತಿ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.