ಕಳೆದ 5 ವರ್ಷಗಳಲ್ಲಿ ಭಾರತದ 298 ಮಂದಿಗೆ ಪಾಕ್ ಪೌರತ್ವ!

By Suvarna Web DeskFirst Published Aug 20, 2017, 3:40 PM IST
Highlights

ಭಾರತದ 298 ಮಂದಿಗೆ ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನವು ಪೌರತ್ವ ನೀಡಿದೆ ಎಂದು ಆಂತರಿಕ ವ್ಯವಹಾರಗಳ ಇಲಾಖೆ ಹೇಳಿದೆ.  2012ರಿಂದ 14 ಏಪ್ರಿಲ್ 2017ರವರೆಗೆ 298 ಬಾರತೀಯ ವಲಸಿಗರಿಗೆ ಪಾಕಿಸ್ತಾನವು ಪೌರತ್ವ ನೀಡಿದೆ ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಇಲಾಖೆಯು ಶನಿವಾರ ಹೇಳಿಕೆ ನೀಡಿದೆ.

ಇಸ್ಲಾಮಾಬಾದ್: ಭಾರತದ 298 ಮಂದಿಗೆ ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನವು ಪೌರತ್ವ ನೀಡಿದೆ ಎಂದು ಆಂತರಿಕ ವ್ಯವಹಾರಗಳ ಇಲಾಖೆ ಹೇಳಿದೆ.

 2012ರಿಂದ 14 ಏಪ್ರಿಲ್ 2017ರವರೆಗೆ 298 ಬಾರತೀಯ ವಲಸಿಗರಿಗೆ ಪಾಕಿಸ್ತಾನವು ಪೌರತ್ವ ನೀಡಿದೆ ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಇಲಾಖೆಯು ಶನಿವಾರ ಹೇಳಿಕೆ ನೀಡಿದೆ.

ಆಡಳಿತ ಪಕ್ಷದ ಸಂಸದ ಶೇಖ್ ರೊಹೈಲ್ ಅಸ್ಗರ್ ನ್ಯಾಶನಲ್ಲ ಅಸ್ಸೆಂಬ್ಲಿಯಲ್ಲಿ ಕೇಳಿರುವ ಪ್ರಶ್ನೆಗೆ ಈ  ಉತ್ತರ ಸಿಕ್ಕಿದೆಯೆಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.

2012ರಲ್ಲಿ 48, 2013ರಲ್ಲಿ 75 ಹಾಗೂ 2014ರಲ್ಲಿ 76 ಭಾರತೀಯ ಮಂದಿಗೆ ಪೌರತ್ವ ನೀಡಲಾಗಿತ್ತು. 2015ರಲ್ಲಿ ಆ ಸಂಖ್ಯೆ 15 ಕ್ಕಳಿದಿತ್ತು, ಆದರೆ 2016ರಲ್ಲಿ 69ಕ್ಕೇರಿದೆ ಎಂದು ವಿವರಿಸಲಾಗಿದೆ.

ಪಾಕಿಸ್ತಾನದಲ್ಲಿ ಪೌರತ್ವ ಪಡೆಯುವುದು ಸಾಮಾನ್ಯವಾಗಿ ಕಷ್ಟಕರ ಕೆಲಸವೆಂದು ಹೇಳಲಾಗುತ್ತಿದ್ದರೂ, ಭಾರತ, ಅಫಘಾನಿಸ್ತಾನ, ಬರ್ಮಾ, ಹಾಗೂ ಬಾಂಗ್ಲಾದೇಶದಿಂದ ಬಹಳ ಮಂದಿಗೆ ಪೌರತ್ವ ಸಿಗುತ್ತಿದೆ ಎಂದು ವರದಿ ಹೇಳಿದೆ.

click me!