
ನವದೆಹಲಿ(ಜೂ.28): ನಿನ್ನೆ ತಾನೇ ‘ಸೈಯದ್ ಸಲಾವುದ್ದೀನ್ ಜಾಗತಿಕ ಉಗ್ರ’ ಎಂದು ಅಮೆರಿಕ ಘೋಷಣೆ ಮಾಡಿತ್ತು. ಆದ್ರೆ ಆ ಉಗ್ರನ ಬೆಂಬಲಕ್ಕೆ ಪಾಕ್ ನಿಂತಿದೆ. ಅಷ್ಟೇ ಅಲ್ಲದೆ ಸೈಯದ್ ಸಲಾವುದ್ದೀನ್ ಹೋರಾಟಗಾರ ಎಂಬುವುದು ಪಾಕ್ ವಾದ. ಏಕೆ ಅಂತೀರಾ ಈ ವರದಿ ನೋಡಿ.
ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸುತ್ತಲೇ ಇದೆ. ಉಗ್ರರ ಕೃತ್ಯಗಳಿಗೆ ಬೆಂಬಲವಾಗಿರುವ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾವುದ್ದೀನ್ನನ್ನು ಅಮೆರಿಕ ಜಾಗತಿಕ ಮಟ್ಟದ ಉಗ್ರ ಎಂದು ನಿನ್ನೆಯಷ್ಟೇ ಘೋಷಣೆ ಮಾಡಿದೆ. ಆದ್ರೆ ಪಾಕಿಸ್ತಾನ ಮಾತ್ರ ಸೈಯದ್ ಸಲಾವುದ್ದೀನ್ ಒಬ್ಬ ಸಾತಂತ್ರ್ಯ ಹೋರಾಟಗಾರ ಅಂತ ಆತನ ಬೆಂಬಲಕ್ಕೆ ನಿಂತಿದೆ.
ಪಾಕಿಸ್ತಾನ ವಾದವೇನು?
ಸೈಯದ್ ಸಲಾವುದ್ದೀನ್ ಕಾಶ್ಮೀರದ ಸ್ವತಂತ್ರ್ಯ ಹೋರಾಟಗಾರ , ಅಮೆರಿಕ ಯಾವುದೇ ಘೋಷಣೆ ಮಾಡುವಾಗ ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು. ಸಲಾವುದ್ದೀನ್ ಜಾಗತಿಕ ಉಗ್ರ ಎನ್ನಲು ಕಾರಣವೇನು? ಎಂಬುವುದನ್ನು ಅಮೆರಿಕ ಬಹಿರಂಗ ಪಡಿಸಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ
ಇನ್ನು ಪಾಕಿಸ್ತಾನ ಈಗ ಮತ್ತೆ ಉಗ್ರ ಸೈಯದ್ ಸಲಾವುದ್ದೀನ್ ಬೆಂಬಲಕ್ಕೆ ನಿಂತಿದೆ. ಸೈಯದ್ ಸಲಾವುದ್ದೀನ್ ಕಾಶ್ಮೀರ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾನೆ. ಏಕಾಏಕಿ ಅವರನ್ನು ಜಾಗತಿಕ ಉಗ್ರ ಅಂತ ಘೋಷಣೆ ಮಾಡಿದ್ದು, ಸರಿಯಾದ ನಿರ್ಧಾರವಲ್ಲವೆಂಬುವುದು ಪಾಕ್ವಾದವಾಗಿದೆ. ಒಟ್ಟಿನಲ್ಲಿ ಪಾಕಿಸ್ತಾನ ಮತ್ತೆ ತನ್ನ ಹಳೆಚಾಳಿ ಮುಂದುವರೆಸಿ ಉಗ್ರ ಸೈಯದ್ ಸಲಾವುದ್ದೀನ್ ರಕ್ಷಣೆಗೆ ರಣತಂತ್ರ ರೂಪಿಸಿ ಉಗ್ರನ ಬೆಂಬಲಕ್ಕೆ ನಿಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.