ಪಾಕಿಸ್ತಾನ: ಭಾರತೀಯ ಟಿವಿ ಕಾರ್ಯಕ್ರಮಗಳ ಮೇಲಿನ ನಿರ್ಬಂಧ ರದ್ದು

By Suvarna Web DeskFirst Published Jul 18, 2017, 9:28 PM IST
Highlights

ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು (PEMRA) ಭಾರತೀಯ ಟಿವಿ ಕಾರ್ಯಕ್ರಮಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಇಂದು ಲಾಹೋರ್ ಕೋರ್ಟ್ ತೆರವುಗೊಳಿಸಿದೆ. ಭಾರತೀಯ ಟಿವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅನುಮತಿ ಕೋರಿ ಪಾಕಿಸ್ತಾನದ ಖಾಸಗಿ ಟಿವಿ ಚ್ಯಾನೆಲ್’ಗಳು ನ್ಯಾಯಾಲಯದ ಮೆಟ್ಟಿಲೇರಿದ್ದುವು.

ಲಾಹೋರ್: ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು (PEMRA) ಭಾರತೀಯ ಟಿವಿ ಕಾರ್ಯಕ್ರಮಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಇಂದು ಲಾಹೋರ್ ಕೋರ್ಟ್ ತೆರವುಗೊಳಿಸಿದೆ.

ಭಾರತೀಯ ಟಿವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅನುಮತಿ ಕೋರಿ ಪಾಕಿಸ್ತಾನದ ಖಾಸಗಿ ಟಿವಿ ಚ್ಯಾನೆಲ್’ಗಳು ನ್ಯಾಯಾಲಯದ ಮೆಟ್ಟಿಲೇರಿದ್ದುವು. ಪ್ರಾಧಿಕಾರದ ಕ್ರಮವನ್ನು ರದ್ದುಗೊಳಿಸಿದ ನ್ಯಾಯಾಲಯವು, ಭಾರತೀಯ ಟಿವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಫೆಡರಲ್ ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲವೆಂದಿದೆ.

ಭಯೋತ್ಪಾದನೆ ಹಾಗೂ ಕದನ ವಿರಾಮ ಉಲ್ಲಂಘನೆ ವಿಚಾರವಾಗಿ ಭಾರತ-ಪಾಕಿಸ್ತಾನದ ನಡುವಿನ ಸಂಬಂಧಗಳು ಹದೆಗೆಡುತ್ತಿರುವ ಹಿನ್ನೆಲೆಯಲ್ಲಿ, ಕಳೆದ ವರ್ಷ ಅ.19ರಂದು ಪ್ರಾಧಿಕಾರವು ಭಾರತೀಯ ಟಿವಿ ಕಾರ್ಯಕ್ರಮಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.    

ಪ್ರಾಧಿಕಾರದ ಆದೇಶವನ್ನು ಪಾಕಿಸ್ತಾನದ ಖಾಸಗಿ ಟಿವಿ ಸಂಸ್ಥೆಯು ನ್ಯಾಯಲಯದಲ್ಲಿ ಪ್ರಶ್ನಿಸಿತ್ತು.

(ಸಾಂದರ್ಭಿಕ ಚಿತ್ರ)

click me!