ಪಾಕ್ ವಶದಲ್ಲಿ ವಿಂಗ್ ಕಮಾಂಡರ್?: ಸ್ವ'ಅಭಿನಂದನ್' ಪಾಕ್ ಜಾಯಮಾನ!

Published : Feb 27, 2019, 02:07 PM ISTUpdated : Feb 27, 2019, 02:14 PM IST
ಪಾಕ್ ವಶದಲ್ಲಿ ವಿಂಗ್ ಕಮಾಂಡರ್?: ಸ್ವ'ಅಭಿನಂದನ್' ಪಾಕ್ ಜಾಯಮಾನ!

ಸಾರಾಂಶ

ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಮಿಗ್-21 ವಿಮಾನ ಪತನ ಪ್ರಕರಣ| ಪಾಕ್ ವಶದಲ್ಲಿದ್ದಾರಾ ಭಾರತದ ವಿಂಗ್ ಕಮಾಂಡರ್?| ವಿಂಗ್ ಕಮಾಂಡರ್ ಅಭಿನಂದನ್ ಬಂಧಿಸಿರುವುದಾಗಿ ಹೇಳಿಕೊಂಡ ಪಾಕ್| ವಿಡಿಯೋ ಸತ್ಯಾಸತ್ಯತೆ ಖಚಿತತೆ ಕೊಡಬೇಕಿದೆ ವಾಯುಸೇನೆ|

ಇಸ್ಲಾಮಾಬಾದ್(ಫೆ.27): ಭಾರತೀಯ ವಾಯುಪಡೆಯ ಮಿಗ್-21 ವಿಮಾನ ಪತನ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಿಗ್-21 ವಿಮಾನವನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದ್ದಲ್ಲದೇ, ಇದೀಗ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿದ್ದಾಗಿ ಹೇಳಿಕೊಂಡಿದೆ.

ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪಾಕ್, ಇದೊಂದು ಅಭೂತಪೂರ್ವ ಯಶಸ್ಸು ಎಂದು ಹೇಳಿಕೊಂಡಿದೆ. ರಕ್ತಸಿಕ್ತ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿ ಕಾರಿನಲ್ಲಿ ಕರೆಯೊಯ್ಯುವ ವಿಡಿಯೋ ಇದಾಗಿದೆ.

"

ಆದರೆ ಈ ವಿಡಿಯೋ ಸತ್ಯಾಸತ್ಯತೆ ಕುರಿತು ಭಾರತದ ವಾಯುಸೇನೆ ಇದುವರೆಗೂ ಯಾವುದೇ ಅಧಿಕೃತ ಹೇಳಿಲ್ಲ.

ಅಸಲಿ ಕತೆ ಏನು?:

ಅಸಲಿಗೆ ಇಂತದ್ದೊಂದು ಸುಳ್ಳು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯೇ ಅಪ್ಲೋಡ್ ಮಾಡಲಾಗಿದೆ. ಅಲ್ಲದೇ ಬೆಂಗಳೂರಿನ ಏರ್‌ ಶೋಗೂ ಮೊದಲು ನಡೆದಿದ್ದ ಸೂರ್ಯ ಕಿರಣ್ ವಿಮಾನ ಅಪಘಾತದಲ್ಲಿ ಗಾಯಗೊಂಡಿದ್ದ ಪೈಲೆಟ್ ಓರ್ವರ ವಿಡಿಯೋ ಬಳಸಿ ಪಾಕಿಸ್ತಾನ ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿವೆ.

ಇತ್ತ ಬೆಳಗ್ಗೆಯಷ್ಟೇ ಭಾರತೀಯ ವಾಯುಪಡೆಯ ಮಿಗ್-21 ವಿಮಾನ ಹೊಡೆದಿರುವುದಾಗಿ ಹೇಳಿದ್ದ ಮೇಜರ್ ಜನರಲ್ ಆಸಿಫ್ ಗಫೂರ್, ಇದೀಗ ಉಲ್ಟಾ ಹೊಡೆದಿದ್ದು, ಬದ್ಗಾಮ್ ನಲ್ಲಿ ಪತನಗೊಂಡ ವಿಮಾನಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ