26/11 ದಾಳಿಯ ಕೈವಾಡ ಪಾಕ್ ಸರ್ಕಾರದಲ್ಲ, ಉಗ್ರರದ್ದು

By Suvarna Web DeskFirst Published Mar 6, 2017, 12:58 PM IST
Highlights

ಮುಂಬೈ ದಾಳಿಯಲ್ಲಿ ಭಾರತೀಯ ಸೇನೆಗೆ ಜೀವಂತ ಸಿಕ್ಕ ದಾಳಿಕೋರ ಅಜ್ಮಲ್ ಕಸಬ್' ಪಾಕ್ ನಾಗರಿಕ ಎಂದು ಮಾಧ್ಯಮಗಳಿಗೆ ತಿಳಿಸಿದ ಪರಿಣಾಮ ದುರಾನಿಯನ್ನು ಪಾಕ್ ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು.

ನವದೆಹಲಿ(ಮಾ.06):ಮುಂಬೈನಲ್ಲಿ 26/11ರಲ್ಲಿ ನಡೆದ ದಾಳಿ ಪಾಕ್'ನಲ್ಲಿರುವ ಉಗ್ರಗಾಮಿ ಗುಂಪುಗಳ ಕೈವಾಡವೇ ಹೊರತು ಪಾಕ್ ಸರ್ಕಾರ ಭಾಗಿಯಾಗಿಲ್ಲ ಎಂದು ಪಾಕ್'ನ ಮಾಜಿ ಭದ್ರತಾ ಸಲಹೆಗಾರ ಮಹಮೊದ್ ಅಲಿ ದುರಾನಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ರಕ್ಷಣಾ ಅಧ್ಯಯನ ಹಾಗೂ ವಿಶ್ಲೇಷಣಾ ಸಂಸ್ಥೆಯು ಆಯೋಜಿಸಿದ್ದ ಭಯೋತ್ಪಾನೆ ಕುರಿತಾದ ಸಮಾವೇಶದಲ್ಲಿ ಮಾತನಾಡಿ,ಮುಂಬೈ'ನಲ್ಲಿ ನಡೆದ 26/11ರ ಭೀಕರ ದಾಳಿಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ದಾಳಿಯ ರುವಾರಿ ಲಷ್ಕರ್ ಇ ತೊಯ್ಬಾದ ಮುಖ್ಯಸ್ಥ ಹಫೀಜ್ ಸಯ್ಯದ'ನ ವಿರುದ್ಧ ಪಾಕ್  ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಮುಂಬೈ ದಾಳಿಯಲ್ಲಿ ಭಾರತೀಯ ಸೇನೆಗೆ ಜೀವಂತ ಸಿಕ್ಕ ದಾಳಿಕೋರ ಅಜ್ಮಲ್ ಕಸಬ್' ಪಾಕ್ ನಾಗರಿಕ ಎಂದು ಮಾಧ್ಯಮಗಳಿಗೆ ತಿಳಿಸಿದ ಪರಿಣಾಮ ದುರಾನಿಯನ್ನು ಪಾಕ್ ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು.

ದುರಾನಿ ಅವರು ಪಾಕ್'ನ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಸಂದರ್ಭದಲ್ಲಿ ನವೆಂಬರ್ 26, 2008ರಲ್ಲಿ 10 ಪಾಕ್ ಉಗ್ರರು ದೋಣಿಯ ಮೂಲಕ ಮುಂಬೈಗೆ ಆಗಮಿಸಿ ವಿದೇಶಿಯರು ಒಳಗೊಂಡು 166 ಭಾರತೀಯರನ್ನು ಕೊಂದಿದ್ದರು. ಆದರೆ ಭಾರತೀಯ ಕಮಾಂಡೊಗಳು 10 ಉಗ್ರರಲ್ಲಿ 9 ಕೊಂದು ಅಜ್ಮಲ್ ಕಸಬ್'ನನ್ನು ಮಾತ್ರ ಜೀವಂತ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ತದ ನಂತರ ಆತನನ್ನು 2012ರಲ್ಲಿ ಗಲ್ಲಿಗೇರಿಸಲಾಗಿತ್ತು.     

click me!