
ಮುಂಬೈ: ಕೇಂದ್ರೀಯ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರನ್ನು ಸರ್ಕಾರ ವಜಾಗೊಳಿಸಿದ್ದು, ಖ್ಯಾತ ಸಾಹಿತಿ ಪ್ರಸೂನ್ ಜೋಶಿಯವರನ್ನು ಆ ಹುದ್ದೆಗೆ ನೇಮಿಸಿದೆ.
ಕೇಂದ್ರೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾದ ಬಳಿಕ ಪಹ್ಲಾಜ್ ನಿಹಲಾನಿಯ ಹಲವು ನಡೆಗಳು ವಿವಾದವನ್ನು ಸೃಷ್ಟಿಸಿದ್ದವು. ಪಹ್ಲಾಜ್ ನಿಹಲಾನಿ ಮಂಡಳಿಯನ್ನು ತಮ್ಮ ಸ್ವತ್ತು ಎಂಬಂತೆ ವರ್ತಿಸುತ್ತಿದ್ದರು ಎಂದು ಸಹೋದ್ಯೋಗಿಗಳು ಅವಲತ್ತುಕೊಂಡಿದ್ದರೆ, ಸಿನೆಮಾ ನಿರ್ಮಾಪಕರು, ನಿರ್ದೇಶಕರು ಅನಗತ್ಯ ಹಸ್ತಕ್ಷೇಪ ಹಾಗೂ ನೈತಿಕ ಪೊಲೀಸ್’ಗಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಇಂದು ಸರ್ಕಾರ್, ಲಿಪ್’ಸ್ಟಿಕ್ ಅಂಡರ್ ಮೈ ಬುರ್ಖಾ ಮುಂತಾದ ಚಿತ್ರಗಳಿಗೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದರು.
ಚಲನಚಿತ್ರಗಳಲ್ಲಿ ಲೈಂಗಿಕ ದೃಶ್ಯಗಳು, ಬೈಗುಳ, ಫೋನ್ ಸೆಕ್ಸ್ ಮುಂತಾದವುಗಳಿಗೆ ಪಹ್ಲಾಜ್ ನಿಹಲಾನಿ ತೀವ್ರವಾಗಿ ವಿರೋಧಿಸುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.