
ಮೈಸೂರು(ಆ.11): ರೈತರ ಹಿತದೃಷ್ಟಿ ಕಾಪಾಡುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಇನ್ಮುಂದೆ ಮಲ್ಟಿಪ್ಲೆಕ್ಸ್, ಮಾಲ್ಗಳಲ್ಲಿ ತಂಪು ಪಾನಿಯಗಳಿಗೆ ಬ್ರೇಕ್ ನೀಡಿ, ರೈತರ ಬೆಳೆಯುವ ಎಳನೀರು ಮಾತ್ರ ಮಾರುವಂತೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲಾ ಮಲ್ಟಿಪ್ಲೆಕ್ಸ್ ಹಾಗೂ ಮಾಲ್ಗಳಲ್ಲಿ ಇನ್ಮುಂದೆ ಕೇವಲ ಎಳನೀರು ಮಾತ್ರ ,ಮಾರಾಟ ಮಾಡುವಂತೆ ಡಿಸಿ ರಂದೀಪ್ ಮೈಸೂರು ಚಲನಚಿತ್ರ ಒಕ್ಕೂಟಕ್ಕೆ ಪತ್ರ ಬರೆದಿದ್ದಾರೆ.
ರೈತರ ಉತ್ತೇಜನಕ್ಕೆ ಮಾಲ್'ಗಳಲ್ಲಿ ಎಳನೀರು ಮಾರುವಂತೆ ಚಿಕ್ಕಮಗಳೂರು ಪರಿಷತ್ ಸದಸ್ಯ ಎಂ.ಕೆ. ಪ್ರಾಣೀಶ್, ತೋಟಗಾರಿಕೆ ಸಚಿವರಿಗೆ ಪತ್ರ ಬರೆದಿದ್ದರು. ತೀವ್ರ ಬರಗಾಲದಿಂದ ತತ್ತರಿಸಿರೋ ರೈತರ ನೆರವಿಗೆ ಬರುವಂತೆ, ತೋಟಗಾರಿಕೆ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದೀಗ ಮೈಸೂರು ಡಿಸಿ ರಂದೀಪ್ ಆದೇಶದಿಂದ ರೈತರಿಗೆ ಸ್ವಲ್ಪ ಭರವಸೆ ಸಿಕ್ಕಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.