ಕೇಂದ್ರೀಯ ಚಲನಚಿತ್ರ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಪಹ್ಲಾಜ್ ನಿಹಲಾನಿ

By Suvarna Web DeskFirst Published Aug 11, 2017, 8:36 PM IST
Highlights

ಕೇಂದ್ರೀಯ ಚಲನಚಿತ್ರ ಮಂಡಳಿ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಪಹ್ಲಾಜ್ ನಿಹಲಾನಿಯನ್ನು ತೆಗೆದು ಹಾಕಿದ್ದು ಅವರ ಸ್ಥಾನಕ್ಕೆ ಖ್ಯಾತ ಸಾಹಿತಿ ಪ್ರಸೂನ್ ಜೋಷಿಯನ್ನು ನೇಮಕ ಮಾಡಲಾಗಿದೆ.

ಬೆಂಗಳೂರು(ಆ.11): ಕೇಂದ್ರೀಯ ಚಲನಚಿತ್ರ ಮಂಡಳಿ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಪಹ್ಲಾಜ್ ನಿಹಲಾನಿಯನ್ನು ತೆಗೆದು ಹಾಕಿದ್ದು ಅವರ ಸ್ಥಾನಕ್ಕೆ ಖ್ಯಾತ ಸಾಹಿತಿ ಪ್ರಸೂನ್ ಜೋಷಿಯನ್ನು ನೇಮಕ ಮಾಡಲಾಗಿದೆ.

ಪಹ್ಲಾಜ್ ನಿಹಾನಿ ಕಾರ್ಯ ವೈಖರಿ ಬಗ್ಗೆ ಸಾಕಷ್ಟು ದೂರುಗಳು, ವಿವಾದಗಳು ಬಂದಿರುವ ಹಿನ್ನಲೆಯಲ್ಲಿ ಅವರ ಆಡಳಿತಾವಧಿ ಪೂರ್ಣಗೊಳ್ಳುವ ಮೊದಲೇ ಅವರನ್ನು ಸಿಬಿಎಫ್’ಸಿ ಅಧ್ಯಕ್ಷ  ಸ್ಥಾನದಿಂದ ತೆಗೆದು ಹಾಕಲಾಗಿದೆ. ಅವರ ಸ್ಥಾನಕ್ಕೆ ಪ್ರಸೂನ್ ಜೋಷಿಯನ್ನು ಆಯ್ಕೆ ಮಾಡಲಾಗಿದೆ. 

ಪಹ್ಲಾಜ್ ಅಧಿಕಾರಾವಾಧಿಯಲ್ಲಿ ಸಿಬಿಎಫ್’ಸಿ ಸಾಕಷ್ಟು ವಿವಾದಕ್ಕೆ ಸಿಲುಕಿಕೊಂಡಿತ್ತು. ಅಲಿಘರ್, ಉಡ್ತಾ ಪಂಜಾಬ್, ಅನ್’ಫ್ರೀಡಂ, ಕ ಬಾಡಿಸ್ಕೇಪ್, ಲಿಪ್’ಸ್ಟಿಕ್ ಅಂಡರ್ ಬುರ್ಕಾ, ಇಂದು ಸರ್ಕಾರ್, ಬಾಬು ಮೋಷಾಯಿ ಸೇರಿದಂತೆ ಸಾಕಷ್ಟು ಚಿತ್ರಗಳು ಸಮಸ್ಯೆಗೆ ಸಿಲುಕಿಕೊಂಡಿತ್ತು. ಇಗಾಗಿ ಕೆಲವು ತಿಂಗಳ ಹಿಂದೆ ಇವರ ರಾಜಿನಾಮೆಗೆ ಒತ್ತಾಯಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.  

 

click me!