ಭಿಕ್ಷೆ ಬೇಡುವುದು ಉದ್ಯೋಗವೆಂದು ಪರಿಗಣಿಸಬೇಕು : ಚಿದಂಬರಂ

By Suvarna Web DeskFirst Published Jan 29, 2018, 8:39 AM IST
Highlights

ಪಕೋಡಾ ಮಾರುವುದು ಒಂದು ಉದ್ಯೋಗವಾದರೆ, ಭಿಕ್ಷೆ ಬೇಡುವುದನ್ನೂ ಉದ್ಯೋಗ ಎಂದೇ ಪರಿಗಣಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮೋದಿ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಯ ವಿಚಾರವಾಗಿ ದಿಕ್ಕು ತೋಚದಂತಾಗಿದೆ.

ನವದೆಹಲಿ: ಪಕೋಡಾ ಮಾರುವುದು ಒಂದು ಉದ್ಯೋಗವಾದರೆ, ಭಿಕ್ಷೆ ಬೇಡುವುದನ್ನೂ ಉದ್ಯೋಗ ಎಂದೇ ಪರಿಗಣಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮೋದಿ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಯ ವಿಚಾರವಾಗಿ ದಿಕ್ಕು ತೋಚದಂತಾಗಿದೆ.

ಪಕೋಡಾ ಮಾರುವುದೂ ಒಂದು ಉದ್ಯೋಗ ಎಂದು ಮೋದಿ ಹೇಳಿದ್ದಾರೆ. ಉದ್ಯೋಗಕ್ಕೆ ಇದೇ ತರ್ಕ ಅನ್ವಯಿಸುವುದಾದರೆ ಅನಿವಾರ್ಯವಾಗಿ ಭಿಕ್ಷೆ ಬೇಡುವ ಬಡವರು ಅಥವಾ ಅಂಗವಿ ಕಲರನ್ನೂ ಉದ್ಯೋಗಿಗಳು ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಚಿದು ಹೇಳಿದ್ದಾರೆ.

click me!