
ಬೆಂಗಳೂರು (ಸೆ.17): ಚಿಕ್ಕಪೇಟೆಯ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಸಂಬಂಧಿಸಿ ಚಿಕ್ಕಪೇಟೆ ಪೊಲೀಸರು ಅಂಗಡಿ ಮಾಲೀಕ ನರೇಂದ್ರ ಎಂಬಾತನನ್ನು ಬಂಧಿಸಿದ್ದಾರೆ.
ವಿಮೆ ಹಣಕ್ಕಾಗಿ ಮಾಲೀಕ ನರೇಂದ್ರನೇ ಅಂಗಡಿಗೆ ಬೆಂಕಿ ಹಚ್ಚಿಸಿದ್ದ ಎಂದು ತಿಳಿದು ಬಂದಿದೆ.
ವ್ಯವಹಾರದಲ್ಲಿ ಒಂದೂವರೆ ಕೋಟಿ ಸಾಲ ಮಾಡಿದ್ದ ನರೇಂದ್ರ ಅದನ್ನು ತೀರಿಸಲು ರೂ.1.80 ಕೋಟಿ ವಿಮೆ ಇರುವ ಎಲೆಕ್ಟ್ರಿಕಲ್ ಅಂಗಡಿಗೆ ಬೆಂಕಿ ಹಾಕುವ ಯೋಜನೆ ರೂಪಿಸಿದ್ದಾನೆ. ಅದರಂತೆ ತನ್ನ ಸ್ನೇಹಿತ ಗಜೇಂದ್ರನಿಂದ ಅಂಗಡಿಗೆ ಬೆಂಕಿ ಹಚ್ಚಿಸಿದ್ದಾನೆಂದು ತಿಳಿದುಬಂದಿದೆ.
ಆದರೆ ಅಗ್ನಿ ದುರಂತದಲ್ಲಿ ಗಜೇಂದ್ರ ಸಜೀವ ದಹನವಾಗಿದ್ದ. ಮತ್ತೊಬ್ಬ ಕಾರ್ಮಿಕ ಅರುಣ್ಗೆ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ. ಗಿರಿನಗರದ ಖಾಸಗಿ ಆಸ್ಪತ್ರೆಯಲ್ಲಿ ಅರುಣ್ಗೆ ಚಿಕಿತ್ಸೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.