ಮಹಾರಾಷ್ಟ್ರದಲ್ಲಿ 12,000 ರೈತರ ಆತ್ಮಹತ್ಯೆ!

By Web DeskFirst Published Jun 22, 2019, 9:17 AM IST
Highlights

ಮಹಾರಾಷ್ಟ್ರದಲ್ಲಿ 12000 ರೈತರು ಆತ್ಮಹತ್ಯೆಗೆ ಶರಣು| ವಿಧಾನಸಭೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸರ್ಕಾರ ಮಾಹಿತಿ

ಮುಂಬೈ[ಜೂ.22]: ಸದಾ ಬರಗಾಲಕ್ಕೆ ತುತ್ತಾಗುವ ಮಹಾರಾಷ್ಟ್ರದಲ್ಲಿ 2015-2018ರ ಮೂರು ವರ್ಷಗಳ ಅವಧಿಯಲ್ಲಿ 12 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಜ್ಯ ವಿಧಾನಸಭೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸರ್ಕಾರ ಮಾಹಿತಿ ನೀಡಿದೆ.

ಈ ಬಗ್ಗೆ ಶುಕ್ರವಾರ ವಿಧಾನಸಭೆಗೆ ಲಿಖಿತ ಉತ್ತರ ನೀಡಿದ ಪರಿಹಾರ ಮತ್ತು ಪುನರ್ವಸತಿ ಸಚಿವ ಸುಭಾಷ್‌ ದೇಶಮುಖ್‌ ಅವರು, ‘ಮೂರು ವರ್ಷಗಳ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾದ 12,021 ಅನ್ನದಾತರ ಪೈಕಿ 6888 ರೈತರು, ಸರ್ಕಾರ ನೀಡುವ ಪರಿಹಾರಕ್ಕೆ ಅರ್ಹವಾಗಿದ್ದಾರೆ. ಇದರಲ್ಲಿ 6845 ರೈತರ ಪ್ರತೀ ಕುಟುಂಬಗಳಿಗೆ 1 ಲಕ್ಷ ರು. ಪರಿಹಾರ ನೀಡಲಾಗಿದೆ’ ಎಂದು ತಿಳಿಸಿದರು.

ಅಲ್ಲದೆ, 2019ರ ಜನವರಿಯಿಂದ ಮಾಚ್‌ರ್‍ವರೆಗೂ 610 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 182 ರೈತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

click me!