ಸತತ ಆರನೇ ವರ್ಷವೂ 11 ಲಕ್ಷ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್| ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಘೋಷಣೆ
ನವದೆಹಲಿ[ಸೆ.19]: ರೈಲ್ವೆಯ 11 ಲಕ್ಷಕ್ಕೂ ಅಧಿಕ ನೌಕರರಿಗೆ 78 ದಿನಗಳಿಗೆ ಸಮಾನವಾದ ಉತ್ಪಾದನೆ ಆಧಾರಿತ ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸತತ ಆರನೇ ವರ್ಷವೂ ರೈಲ್ವೆ ನೌಕರರಿಗೆ ಸರ್ಕಾರ ಬೋನಸ್ ಪ್ರಕಟಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ನೀಡಲಾಗುವುದು. ಇದರಿಂದ 11,52,000 ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.
ಈ ಉದ್ದೇಶಕ್ಕಾಗಿ ಸರ್ಕಾರ 2,024 ಕೋಟಿ ರು. ಒದಗಿಸಲಿದೆ ಎಂದು ಹೇಳಿದ್ದಾರೆ. ಗೆಜೆಟೆಡ್ ಹುದ್ದೆಯೇತರರಿಗೆ ಈ ಬೋನಸ್‌ನ ಲಾಭ ಸಿಗಲಿದೆ.