
ಶಿಲ್ಲಾಂಗ್ [ನ.03]: ಮೇಘಾಲಯಕ್ಕೆ ಭೇಟಿ ನೀಡುವ ಅನ್ಯ ರಾಜ್ಯದ ಜನರು, ಇನ್ನು ಅಲ್ಲಿ 1 ದಿನಕ್ಕಿಂತ ಹೆಚ್ಚು ಕಾಲ ಇರಬೇಕು ಎಂದರೆ ನೋಂದಣಿ ಮಾಡಿಸಿಕೊಳ್ಳಬೇಕು.
ಇಂತಹ ಒಂದು ಹೊಸ ನಿಯಮಕ್ಕೆ ಮೇಘಾಲಯ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯದ ಬುಡಕಟ್ಟು ಜನರ ಹಿತರಕ್ಷಣೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಜರುಗಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಮೇಘಾಲಯ ನಿವಾಸಿಗಳ ಸುರಕ್ಷತೆ ಹಾಗೂ ಭದ್ರತಾ ಕಾಯ್ದೆ-2016ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ನಿರ್ಧರಿಸಿದ್ದು, ಶೀಘ್ರ ಇದಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಈ ನದಿ ಮೇಲೆ ಸಾಗಿದರೆ ಕನ್ನಡಿ ಮೇಲೆ ನಡೆದಂಥ ಅನುಭವ..
‘ಮೇಘಾಲಯದ ನಿವಾಸಿಯಾಗದೇ ಇರುವ ಹೊರರಾಜ್ಯದ ಜನರು, ರಾಜ್ಯದಲ್ಲಿ 24 ತಾಸಿಗಿಂತ ಹೆಚ್ಚು ಕಾಲ ಇರಬೇಕು ಎಂದುಕೊಂಡಿದ್ದಲ್ಲಿ, ಸರ್ಕಾರಕ್ಕೆ ಅವರು ದಾಖಲಾತಿಗಳನ್ನು ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಈ ನಿಯಮದಿಂದ ಕೇಂದ್ರ, ರಾಜ್ಯ ಹಾಗೂ ಜಿಲ್ಲಾಡಳಿತದ ನೌಕರರಿಗೆ ವಿನಾಯಿತಿ ನೀಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಪ್ರೀಸ್ಟೋನ್ ಟೈನ್ಸಾಂಗ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.