ನಲಪಾಡ್'ಗೆ ನಾಳೆ ನಿರ್ಣಾಯಕ ದಿನ

First Published Jun 13, 2018, 10:31 PM IST
Highlights
  •  ನಲಪಾಡ್ ಪರ  ಹಿರಿಯ ವಕೀಲ ಬಿ.ವಿ. ಆಚಾರ್ಯ ವಾದ ಮಂಡನೆ
  • ಜಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಸಾಧ್ಯತೆ

ಬೆಂಗಳೂರು[ಜೂ.13]: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ನಲಪಾಡ್ ಗೆ ನಾಳೆ ನಿರ್ಣಾಯಕ ದಿನ.

ಹೈಕೋರ್ಟ್ನಲ್ಲಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಕ್ತಾಯವಾಗಿದ್ದು, ಆದೇಶ ಕಾಯ್ದಿರಿಸಿದೆ. ನಲಪಾಡ್ ಪರ  ಹಿರಿಯ ವಕೀಲ ಬಿ.ವಿ. ಆಚಾರ್ಯ ವಾದ ಮಂಡಿಸಿದ್ದು ನಲಪಾಡ್ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿಲ್ಲ ಮಾತಿನ ಮೂಲಕ ಶುರುವಾದ ಜಗಳ ನಂತರ ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು ಆರೋಪಿಯನ್ನು ಭಾರೀ ಪ್ರಭಾವಿ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ’ಎಂದಿದ್ದಾರೆ.

ಪ್ರತಿಯಾಗಿ ಎಸ್ ಪಿಪಿ ಶ್ಯಾಮಸುಂದರ್ ವಾದಿಸಿದ್ದು ಕೈಯಿಂದ ಹಲ್ಲೆ ಮಾಡಿದ್ದಾರೆ ಎಂಬ ಕಾರಣಕ್ಕೆ ಜಾಮೀನು ನೀಡಿದರೆ ಕೆಟ್ಟ ಸಂದೇಶ ಹೋಗುತ್ತೆ. ಸಿಸಿಟಿವಿ ದೃಶ್ಯ ಆರೋಪಿಯ ಕ್ರೌರ್ಯವನ್ನು ಹೇಳುತ್ತಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ. ಹೀಗಾಗಿ ನಾಳೆ ಹೈಕೊರ್ಟ್ನಿಂದ ಹೊರಬೀಳುವ ಆದೇಶ ಬಾರಿ ಕುತೂಹಲ ಮೂಡಿಸಿದೆ.

click me!