ನೀವು ಸೃಜನಶೀಲರೇ? ಹಾಗಾದರೆ ನಿಮಗಿದೆ ಪ್ರವಾಸೋದ್ಯಮ ಇಲಾಖೆಯಲ್ಲಿ ರೂ.5 ಲಕ್ಷ ಗೆಲ್ಲುವ ಸುವರ್ಣಾವಕಾಶ!

Published : Mar 13, 2017, 10:29 AM ISTUpdated : Apr 11, 2018, 01:07 PM IST
ನೀವು ಸೃಜನಶೀಲರೇ? ಹಾಗಾದರೆ ನಿಮಗಿದೆ ಪ್ರವಾಸೋದ್ಯಮ ಇಲಾಖೆಯಲ್ಲಿ ರೂ.5 ಲಕ್ಷ ಗೆಲ್ಲುವ ಸುವರ್ಣಾವಕಾಶ!

ಸಾರಾಂಶ

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು, ಬೆಂಗಳೂರಿನ ಕ್ರಿಯಾಶೀಲ ಗುಣವಿಶೇಷಣಗಳನ್ನು ಪ್ರತಿನಿಧಿಸುವ ಹೊಸ ಮುದ್ರೆ ಹಾಗೂ ಘೋಷವಾಕ್ಯವನ್ನು ವಿನ್ಯಾಸಗೊಳಿಸಲು ಚಿಂತನೆ ನಡೆಸಿದೆ. ಆ ನಿಟ್ಟಿನಲ್ಲಿ ಮುದ್ರಾವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲು ಸೃಜನಶೀಲ ಕಲ್ಪನೆಯುಳ್ಳವರಿಗೆ ಇಲಾಖೆಯು ಮನವಿ ಮಾಡಿಕೊಂಡಿದೆ.

ಸಾರ್ವಜನಿಕರು ರೂ.5 ಲಕ್ಷ ಬಹುಮಾನ ಗೆಲ್ಲುವ ಅವಕಾಶವನ್ನು ಪ್ರವಾಸೋದ್ಯಮ ಇಲಾಖೆ ಮುಂದಿಟ್ಟಿದೆ. ರೂ. 5 ಲಕ್ಷವನ್ನು ನಿಮ್ಮದಾಗಿಸಬೇಕಾದರೆ, ನೀವು ಮಾಡಬೇಕಾದುದು ಒಂದು ವಿನ್ಯಾಸ ಹಾಗೂ ಘೋಷವಾಕ್ಯವನ್ನು ರಚಿಸಿ ಕಳುಹಿಸಬೇಕು.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು, ಬೆಂಗಳೂರಿನ ಕ್ರಿಯಾಶೀಲ ಗುಣವಿಶೇಷಣಗಳನ್ನು ಪ್ರತಿನಿಧಿಸುವ ಹೊಸ ಮುದ್ರೆ ಹಾಗೂ ಘೋಷವಾಕ್ಯವನ್ನು ವಿನ್ಯಾಸಗೊಳಿಸಲು ಚಿಂತನೆ ನಡೆಸಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನ ಬಗ್ಗೆ ನಿಮ್ಮ ಕಲ್ಪನೆಯೇನು? ಎಂಬುವುದನ್ನು ವಿನ್ಯಾಸಗೊಳಿಸುವ ಮೂಲಕ ಈ ಮುದ್ರಾವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲು ಸೃಜನಶೀಲ ಕಲ್ಪನೆ ಹಾಗೂ ಕಲಾಕೌಶಲ್ಯವುಳ್ಳವರಿಗೆ ಇಲಾಖೆಯು ಮನವಿ ಮಾಡಿಕೊಂಡಿದೆ.

ತಾವು ವಿನ್ಯಾಸಗೊಳಿಸಿದ ಮುದ್ರೆ ಹಾಗೂ ಘೋಷವಾಕ್ಯವನ್ನು ಸಲ್ಲಿಸಲು 25 ಮಾರ್ 2017 ಕೊನೆ ದಿನಾಂಕ.

 

ಬೆಂಗಳೂರು:

ಬೆಂಗಳೂರು ನಗರ ವಿಶ್ವಕ್ಕೆ ಕೊಟ್ಟ ಕೊಡುಗೆ ಅಪಾರ- ಭವ್ಯ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಸ್ಮಾರಕಗಳು, ವಿಶಿಷ್ಟ ಖಾದ್ಯಗಳು, ಅಮ್ಯೂಸ್’ಮೆಂಟ್ ಪಾರ್ಕ್’ಗಳು, ಗಾಲ್ಫ್ ಕೋರ್ಸ್’ಗಳು, ಸಡಗರ ಭರಿತ ಶಾಪಿಂಗ್ ಮಾಲ್’ಗಳು, ಮನರಂಜನೆ, ವಿಜ್ಞಾನ ಹಾಗೂ ತಂತ್ರಜ್ಞಾನಗಳು, ನವೋದ್ಯಮಗಳು, ರಾಷ್ಟ್ರೀಯೋದ್ಯಾನ, ನಿತ್ಯಹರಿದ್ವರ್ಣ ಸಸ್ಯರಾಶಿ, ಸ್ನೇಹಮಯಿ ಶ್ರೀಸಾಮಾನ್ಯರು ಹಾಗೂ ಇನ್ನೂ ಹಲವು.

ಬೆಂಗಳೂರು ಹಲವು ಉಪಮೆಗಳ ವೈವಿಧ್ಯಮಯನಗರಿ ಹಾಗೂ ಬಗೆಬಗೆಯ ಪ್ರವಾಸಿಗರನ್ನು ಆಕರ್ಷಿಸುವ ಗಮ್ಯ ಸ್ಥಾನ.  ನಮ್ಮ ಬೆಂಗಳುರು 480 ವರ್ಷಗಳ  ಸುವರ್ಣ ಇತಿಹಾಸದ ನಾಡು. ಒಮ್ಮೆ ಹಲವು  ಗ್ರಾಮಗಳ  ಪ್ರಾಂತವಾಗಿದ್ದ  ಬೆಂಗಳೂರು ಈಗ ಸ್ಪಂದನಶೀಲ ಬಹುಸಂಸ್ಕೃತೀಯ  ಮಹಾನಗರವಾಗಿ ಹೊರಹೊಮ್ಮಿದೆ.

ಹೆಚ್ಚಿನ ವಿವರಗಳಿಗೆ http://www.karnatakatourism.org/ ಭೇಟಿ ನೀಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್