#OperationGold ಕಪ್ಪು ಹಣಕ್ಕೆ ಕೆ. ಜಿ ಚಿನ್ನಕೊಡುವ ಖದೀಮರಿವರು!

Published : Nov 23, 2016, 03:26 AM ISTUpdated : Apr 11, 2018, 01:05 PM IST
#OperationGold ಕಪ್ಪು ಹಣಕ್ಕೆ ಕೆ. ಜಿ ಚಿನ್ನಕೊಡುವ ಖದೀಮರಿವರು!

ಸಾರಾಂಶ

ಕಪ್ಪು ಹಣ ಕೊಟ್ಟರೆ ಕೆಜಿಗಟ್ಟಲೆ ಚಿನ್ನ ಕೊಡುವ ಗ್ಯಾಂಗ್ ಒಂದಿದೆ ಎನ್ನುವ ಮಾಹಿತಿ ನಮ್ಮ ತಂಡಕ್ಕೆ ತಿಳಿಯಿತು,. ಕೂಡಲೇ ಕಾರ್ಯ ಪ್ರವೃತ್ತರಾದ ಕವರ್ ಸ್ಟೋರಿ ತಂಡ ಕಾರ್ಯಾಚರಣೆಗೆ ಇಳಿಯಿತು. ಈ ಬಲೆಗೆ ಬಿದ್ದವರು ಬೆಂಗಳೂರಿನ ರಾಜಾಜಿನಗರದ ಹರೀಶ್ ಹಾಗೂ ಭೂಷಣ್. ಇವರನ್ನು ಭೇಟಿಯಾದ ರಹಸ್ಯ ತಂಡ 20 ಕೋಟಿ ಕಪ್ಪು ಹಣ ಿದೆ ಇದನ್ನು ಬಿಳಿ ಮಾಡಿ ಎಂದು ಕೇಳಿಕೊಂಡಿತ್ತು. ಇಷ್ಟು ಹೇಳಿದ್ದೇ ತಡ ಈ ಖದೀಮರು ಮೂರು ಆಫರ್'ಗಳನ್ನಿಟ್ಟರು.

ಬೆಂಗಳೂರು(ನ.23): ಸುವರ್ಣ ನ್ಯೂಸ್ ನ ಕವರ್ ಸ್ಟೋರಿ ತಂಡ ನಡೆಸುತ್ತಿರೋ ಆಪರೇಷನ್ ಬ್ಲ್ಯಾಕ್ ಅಂಡ್ ವೈಟ್‌'ಗೆ ಮತ್ತೊಂದು ಭರ್ಜರಿ ಬಲಿ ಬಿದ್ದಿದೆ. ಕಪ್ಪು ಹಣವನ್ನು ಬಿಳಿ ಮಾಡುತ್ತಿರೋ ಗ್ಯಾಂಗ್ ವೊಂದರ ಬಣ್ಣ ಬಯಲಾಗಿದೆ. ಅದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

ಈಗಾಗಲೇ ಹತ್ತಾರು ಗ್ಯಾಂಗ್'ಗಳು ಕಪ್ಪು ಹಣ ಬಿಳಿ ಮಾಡುವ ಅಕ್ರಮ ದಂಧೆಯಲ್ಲಿ ತೊಡಗಿವೆ. ದಿನಗಳೆದಂತೆ ಈ ದಂಧೆ ಹೊಸ ರೂಪ ಪಡೆಯುತ್ತಿದೆ. ಈ ದೇಶ ದ್ರೋಹಿಗಳ ಕರಾಳ ಮುಖಗಳನ್ನು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಆಪರೇಷನ್ ಬ್ಲ್ಯಾಕ್ ಆಂಡ್ ವೈಟ್ ಮೂಲಕ ಬಯಲು ಮಾಡುತ್ತಿದೆ.

ಈಗಾಗಲೇ ತಂಡ ಸುಬ್ರಮಣ್ಯೇಶ್ವರ ಕೋ ಆಪರೇಟಿವ್ ಬ್ಯಾಂಕ್'ನ ಕಪ್ಪು ಬಿಳಿ ದಂಧೆ ಹಾಗೂ ಯೂನಿಯನ್ ಬ್ಯಾಂಕ್ ಮತ್ತು ಮಹಾವೀರ್ ಮೆಡಿ ಸೇಲ್ಸ್ ಕಳ್ಳಾಟವನ್ನು ಬಯಲು ಮಾಡಿದೆ. ಿದೀಗ ಕವರ್ ಸ್ಟೋರಿ ತಂಡ ಮತ್ತೊಂದು ಭಾರೀ ಗ್ಯಾಂಗ್'ನ್ನ ಪತ್ತೆ ಹಚ್ಚಿದೆ.

ಕಪ್ಪು ಹಣ ಕೊಟ್ಟರೆ ಕೆಜಿಗಟ್ಟಲೆ ಚಿನ್ನ ಕೊಡುವ ಗ್ಯಾಂಗ್ ಒಂದಿದೆ ಎನ್ನುವ ಮಾಹಿತಿ ನಮ್ಮ ತಂಡಕ್ಕೆ ತಿಳಿಯಿತು,. ಕೂಡಲೇ ಕಾರ್ಯ ಪ್ರವೃತ್ತರಾದ ಕವರ್ ಸ್ಟೋರಿ ತಂಡ ಕಾರ್ಯಾಚರಣೆಗೆ ಇಳಿಯಿತು. ಈ ಬಲೆಗೆ ಬಿದ್ದವರು ಬೆಂಗಳೂರಿನ ರಾಜಾಜಿನಗರದ ಹರೀಶ್ ಹಾಗೂ ಭೂಷಣ್. ಇವರನ್ನು ಭೇಟಿಯಾದ ರಹಸ್ಯ ತಂಡ 20 ಕೋಟಿ ಕಪ್ಪು ಹಣ ಿದೆ ಇದನ್ನು ಬಿಳಿ ಮಾಡಿ ಎಂದು ಕೇಳಿಕೊಂಡಿತ್ತು. ಇಷ್ಟು ಹೇಳಿದ್ದೇ ತಡ ಈ ಖದೀಮರು ಮೂರು ಆಫರ್'ಗಳನ್ನಿಟ್ಟರು.

ಆಫರ್ ನಂ.1: ಒಂದು ಕೆ.ಜಿ ಚಿನ್ನಕ್ಕೆ 45 ಲಕ್ಷ ಜೊತೆಗೆ 5 ಲಕ್ಷ ಕಮಿಷನ್!

ಆಫರ್ ನಂ.2: 35 ಪರ್ಸಂಟೇಜ್'ಗೆ ಬಿಳಿ

ಆಫರ್ ನಂ 3: ಬಿಳಿ ಹಣ ಹೋಮ್ ಡೆಲಿವರಿ

ಎಂಥಾ ಆಫರ್ ಇದು! 27 ಪರ್ಸೆಂಟ್ ಕೊಟ್ರೆ ಸಾಕು ಮನೆಗೇ ಬಿಳಿ ಹಣ ಬರುತ್ತಂತೆ. ಅವರು ನೀಡಿದ ಆಫರ್ ಒಂದು ಬಾರಿ ಬೆಚ್ಚಿ ಬೀಳಿಸುತ್ತದೆ. ಆದರೂ ಅವರ ಚಿನ್ನದ ಆಫರ್ ಸ್ವೀಕರಿಸಿ ಮರುದಿನ ಬರುವುದಾಗಿ ಭರವಸೆ ಕೊಟ್ಟು ಬಂದಿತ್ತು ನಮ್ಮ ತಂಡ.

ಕವರ್ ಸ್ಟೋರಿಗೆ ಚಿನ್ನದ ಶಾಕ್!: ಖದೀಮರ ಕೈಯಲ್ಲಿತ್ತು ಬಿಸ್ಕತ್ತು

ಕೊಟ್ಟ ಭರವಸೆಯಂತೆ ಚಿನ್ನ ಪಡೆಯಲು ಮರುದಿನ ರಾಜಾಜಿನಗರದಲ್ಲಿರುವ ಹರೀಶ್ ಹಾಗೂ ಭೂಷಣ್ ಮನೆಗೆ ನಮ್ಮ ರಹಸ್ಯ ಕಾರ್ಯಾಚರಣೆಯ ತಂಡ ತೆರಳಿತ್ತು. ಅಲ್ಲಿ ವಿನಾಯಕ್ ಎನ್ನುವ ಚಿನ್ನದ ವ್ಯಾಪಾರಿ ಕೂಡಾ ಬಂದಿದ್ದು, ಕೆ.ಜಿಗೆ 44 ಲಕ್ಷ ನಗದು ಹಾಗೂ 5 ಪರ್ಸೆಂಟ್ ಕಮಿಷನ್ ಫಿಕ್ಸ್ ಮಾಡಿಸದ್ದ. ಡೀಲ್ ಕುದುರುತ್ತಿದ್ದಂತೆ ಮಾಗಡಿ ರಸ್ತೆಯ ಮೆಹ್ತಾ ಚಿನ್ನದಂಗಡಿಯ ವಿಕಾಸ್ ಎಂಬಾತ ಚಿನ್ನ ತಗೆದುಕೊಂಡು ಬಂದು ಚಿನ್ನದ ಗಟ್ಟಿಗಳನ್ನೇ ತೋರಿಸಿದ್ದ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ