ವಾನ್ನಾ ಕ್ರೈನಿಂದ ಪಾರಾಗಲು ಎಟಿಎಂ ಬಂದ್'ಗೆ RBI ಸೂಚನೆ: ಮೋದಿ ಕನಸಿಗೆ ಬೀಳುತ್ತಾ ಕೊಕ್ಕೆ?

By Suvarna Web DeskFirst Published May 16, 2017, 8:13 AM IST
Highlights

ಸೈಬರ್​ ದಾಳಿಕೋರರು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದಾರೆ. ಭಾರತ ಸೇರಿದಂತೆ ವಿಶ್ವದ 150ಕ್ಕೂ ಹೆಚ್ಚು ದೇಶಗಳ ಕಂಪ್ಯೂಟರ್ ಜಗತ್ತಿಗೇ ಕನ್ನ ಹಾಕಿದ್ದಾರೆ.  ಈ ಸೈಬರ್ ದುಷ್ಟರ ಕಣ್ಣು ಭಾರತವನ್ನೂ ಬಿಟ್ಟಿಲ್ಲ.. ಅರ್ಥ ವ್ಯವಸ್ಥೆಯ ಬಹುಭಾಗವಾದ ಎಟಿಎಂಗಳ ವಶಕ್ಕೆ ಮುಂದಾಗಿದ್ದಾರೆ. ಹೀಗಾಗಿ ದೇಶದಾದ್ಯಂತ  ಖಾಸಗಿ  ಎಟಿಎಂಗಳು ಬಂದ್​ ಆಗಿದೆ.

ನವದೆಹಲಿ(ಮೇ.16): ಸೈಬರ್​ ದಾಳಿಕೋರರು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದಾರೆ. ಭಾರತ ಸೇರಿದಂತೆ ವಿಶ್ವದ 150ಕ್ಕೂ ಹೆಚ್ಚು ದೇಶಗಳ ಕಂಪ್ಯೂಟರ್ ಜಗತ್ತಿಗೇ ಕನ್ನ ಹಾಕಿದ್ದಾರೆ.  ಈ ಸೈಬರ್ ದುಷ್ಟರ ಕಣ್ಣು ಭಾರತವನ್ನೂ ಬಿಟ್ಟಿಲ್ಲ.. ಅರ್ಥ ವ್ಯವಸ್ಥೆಯ ಬಹುಭಾಗವಾದ ಎಟಿಎಂಗಳ ವಶಕ್ಕೆ ಮುಂದಾಗಿದ್ದಾರೆ. ಹೀಗಾಗಿ ದೇಶದಾದ್ಯಂತ  ಖಾಸಗಿ  ಎಟಿಎಂಗಳು ಬಂದ್​ ಆಗಿದೆ.

ಎಟಿಎಂಗಳಲ್ಲಿ ಮತ್ತೆ ಹಣಕ್ಕಾಗಿ ಪರದಾಡುವಂತಹ ಪರಿಸ್ಥಿತಿ  ನಿರ್ಮಾಣವಾಗಿದೆ. ಜಗತ್ತಿನಾದ್ಯಂತ  ಸುಮಾರು 60 ಸಾವಿರ ಕಂಪನಿಗಳ ಸರಾಸರಿ 20 ಲಕ್ಷಕ್ಕೂ ಹೆಚ್ಚು​​ ಕಂಪ್ಯೂಟರ್​ಗಳು  ರಾನ್ಸಮ್​​​ ವೇರ್  ವೈರೆಸ್'ಗೆ ತುತ್ತಾಗಿದೆ. ಹ್ಯಾಕರ್'​ಗಳು ವೈರಸ್​'ಗಳನ್ನು ಇ-ಮೇಲ್ ಮುಖಾಂತರ ಅಥವಾ ಪಾಪ್ ಅಪ್ ಮುಖಾಂತರ ರವಾನಿಸಿ ಹ್ಯಾಕ್ ಮಾಡಿದ್ದಾರೆ. ಇದರಿಂದ  ಭಾರತದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ಬಿದ್ದಿದ್ದು ಬ್ಯಾಂಕ್​ ಮತ್ತು ATM ವ್ಯವಹಾರಕ್ಕೆ  ತೊಂದರೆಯಾಗಿದೆ. ಸೈಬರ್ ದಾಳಿಯ ಅಟ್ಟಹಾಸಕ್ಕೆ  ಪ್ರಧಾನಿ ಮೋದಿ ಅವರ ಆನ್​ಲೈನ್​ ಕನಸಿಗೆ ಕೊಕ್ಕೆ ಬೀಳಲಿದೆ.  

Latest Videos

ಗ್ರಾಹಕರ ಹಿತ ಮುಖ್ಯ 

ಪ್ರಪಂಚದಾದ್ಯಂತ ವೈರಸ್ ಅಲರ್ಟ್ ಹಿನ್ನೆಲೆಯಲ್ಲಿ  ಖಾಸಗಿ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬದಂತೆ ಆರ್​ಬಿಐ ನಿರ್ದೇಶನ ಮಾಡಿದೆ. ಬೆಂಗಳೂರಿನಾದ್ಯಂತ ಖಾಸಗಿ ಬ್ಯಾಂಕ್ ಎಟಿಎಂಗಳು ಬಂದ್  ಆಗಿದ್ದು , ಇನ್ನು 3 ದಿನ ಖಾಸಗಿ ಬ್ಯಾಂಕ್ ಎಟಿಎಂಗಳಲ್ಲಿ ಹಣ ಸಿಗುವುದು ಅನುಮಾನ. ಆದರೆ ಸರ್ಕಾರಿ ಬ್ಯಾಂಕ್ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ

ವಿಶ್ವಾದ್ಯಂತ ಏಕಕಾಲದಲ್ಲಿ ನಡೆದ ಸೈಬರ್ ದಾಳಿಯಿಂದಾಗಿ ಬ್ಯಾಂಕ್'ಗಳ ಎಟಿಎಂಗಳ ಮೇಲೆ ತೀವ್ರತರ ಪರಿಣಾಮ ಬೀರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಟಿಎಂ ಗಳಲ್ಲಿನ ಸಿಸ್ಟಮ್​ ಅಪ್​ ಡೇಟ್​ ಕಾರ್ಯಕ್ಕೆ ಆರ್ ಬಿಐ   ಸೂಚನೆ ನೀಡಿದೆ. ಈಗಾಗಲೇ ಹಲವು ಬ್ಯಾಂಕ್ ಗಳ ಎಟಿಎಂಗಳು ಕಾರ್ಯ ಸ್ಥಗಿತ ಮಾಡಿದ್ದು,  ಎಟಿಎಂ ದುರಸ್ತಿಯಲ್ಲಿದೆ ಎಂಬ ಬೋರ್ಡ್ ಗಳು ಸಾಮಾನ್ಯವಾಗಿವೆ. ಸದ್ಯ ದೇಶದಲ್ಲಿರುವ 2.25 ಲಕ್ಷ ಎಟಿಎಂಗಳ ಪೈಕಿ ಶೇಕಡಾ 60% ಎಟಿಎಂಗಳಲ್ಲಿ ಔಟ್ ಡೇಟೆಡ್ ವಿಂಡೋಸ್ ಸಾಫ್ಟ್​ವೇರ್ ಅನ್ನು ಬಳಸಲಾಗುತ್ತಿದ್ದು, ಈ  ಎಲ್ಲಾ ಎಟಿಎಂಗಳು ಅಪ್​ಡೇಟ್ ಆಗುವವರೆಗೂ ಇದೇ ಸ್ಥಿತಿ ಮುಂದುವರೆಯಲಿದೆ.

ಒಟ್ಟಿನಲ್ಲಿ ಸೈಬರ್​ ದಾಳಿಯಿಂದ 60 ಸಾವಿರ ಕಂಪನಿಗಳ ಕೆಲಸ ಕಾರ್ಯಗಳಲ್ಲಿ ವಿಳಂಬವಾಗಿದೆ. ಮತ್ತೊಂದು ಹ್ಯಾಕರ್​ಗಳು ನಿಗದಿತ ಸಮಯದಲ್ಲಿ ಹಣ ನೀಡದಿದ್ರೆ ಮತ್ತೊಂದು ದಾಳಿ ಮಾಡ್ತೀವಿ ಅನ್ನೋ ಬೆದರಿಕೆಯ ಸಂದೇಶ ರವಾನಿಸಿದ್ದಾರೆ. ಹೀಗಾಗಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​ಗಳಿಗೆ xp operating system ಅಪ್​ಡೇಟ್​​ ಆಗುವರೆಗೂ ATM ಕೇಂದ್ರಗಳನ್ನ ತೆರೆಯಬೇಡಿ ಅಂತ ಸೂಚಿಸಿದೆ. ಯಾವುದಕ್ಕೂ  ನೀವು  ನಿಮ್ಮ  ಸಿಸ್ಟಮ್​ ಬಗ್ಗೆ ಹುಷಾರಾಗಿರಿ . ಹ್ಯಾಕರ್​'ಗಳು  ನಿಮ್ಮ  ದಾಖಲೆ ಕದಿಯಲು ಹೊಂಚು ಹಾಕಿ ಕುಳಿತಿರುತ್ತಾರೆ.

click me!