ನಿಲ್ಲಲು ಶಕ್ತಿ ಇದ್ರೆ ಮಾತ್ರ ಶಬರಿಮಲೆ, ಮಹಿಳೆಯರಿಗೆ ಈ ಸುದ್ದಿ ಪ್ರಮುಖ

By Web DeskFirst Published Oct 1, 2018, 10:34 PM IST
Highlights

ಶಬರಿಮಲೆ ದೇವಾಲಯ ಪ್ರವೇಶವನ್ನು ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಮುಕ್ತ ಮಾಡಿದ್ದು ಹಳೆ ಸುದ್ದಿ. ಆದರೆ ಈಗ ಅದಕ್ಕೆ ಸಂಬಂಧಿಸಿದ ಇನ್ನೊಂದು ಸುದ್ದಿ ಹೊರಬಿದ್ದಿದೆ. ಇದನ್ನು ಮಹಿಳೆಯರು ಹೇಗೆ ಸ್ವೀಕಾರ ಮಾಡುತ್ತಾರೆ ಕಾದು ನೋಡಬೇಕಿದೆ.

ತಿರುವನಂತಪುರ [ಅ.1] ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮಾಡುವುದು ಅಪ್ರಾಯೋಗಿಕ ಎಂದು ಕೇರಳ ಸರ್ಕಾರ ಹೇಳಿದೆ. ಈ ಮೂಲಕ ಒಂದು ಅರ್ಥದಲ್ಲಿ ಸಮಾನತೆಯನ್ನೇ ಮೆರೆದಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವುದಕ್ಕೆ ಸರ್ಕಾರ ನಿರ್ಧರಿಸಿದೆ. ಆದರೆ ದೇವಾಲಯದಲ್ಲಿ ಮಹಿಳೆಯರಿಗೆಂದೇ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮಾಡುವುದು ಅಪ್ರಾಯೋಗಿಕ ಎಂದು ಹೇಳಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸಭೆ ನಡೆಯಿತು. ದೇವಾಲಯಕ್ಕೆ ಭೇಟಿ ನೀಡುವವರು 8-10 ಗಂಟೆಗಳ ವರೆಗೆ ನಿಲ್ಲಬೇಕಾಗುತ್ತದೆ, ಇದು ಮಹಿಳೆಯರಿಗೂ ಅನ್ವಯವಾಗಲಿದೆ. 8-10 ಗಂಟೆಗಳು ಸರತಿ ಸಾಲಿನಲ್ಲಿ ನಿಲ್ಲುವ ತಾಳ್ಮೆ ಇರುವವರಷ್ಟೇ ಬನ್ನಿ ಎಂದು ದೇವಸ್ವಂ ಸಚಿವ ಸುರೇಂದ್ರನ್ ಹೇಳಿದ್ದಾರೆ.

ಮಹಿಳೆಯರೊಂದಿಗೆ ಕುಟುಂಬದ ಪುರುಷ ಸದಸ್ಯರೂ ಇರುತ್ತಾರೆ. ಆದರೆ ಮಹಿಳೆಯರಿಗೆಂದೇ ಪ್ರತ್ಯೇಕ ಸರತಿ ಸಾಲು ಮಾಡಿದರೆ ಆ ಮಹಿಳೆಯರು ಕುಟುಂಬದ ಬೇರೆ ಸದಸ್ಯರಿಂದ ಪ್ರತ್ಯೇಕವಾಗಿ ನಿಲ್ಲಬೇಕಾಗುತ್ತದೆ. ಆದರೆ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ, ಸ್ನಾನ ಘಟ್ಟಗಳ ವ್ಯವಸ್ಥೆ ಮಾಡಲಾಗುತ್ತದೆ  ಎಂದು ತಿಳಿಸಿದ್ದಾರೆ.

click me!