ಇದೆಂಥ ಹೇಳಿಕೆ.. ಇಮ್ರಾನ್ ಖಾನ್ ಪ್ರಮಾಣಕ್ಕೆ ಹೋಗಿ ಬಂದ ಸಿಧುಗೆ ಏನಾಯ್ತು?

Published : Oct 01, 2018, 09:39 PM ISTUpdated : Oct 01, 2018, 09:47 PM IST
ಇದೆಂಥ ಹೇಳಿಕೆ.. ಇಮ್ರಾನ್ ಖಾನ್ ಪ್ರಮಾಣಕ್ಕೆ ಹೋಗಿ ಬಂದ ಸಿಧುಗೆ ಏನಾಯ್ತು?

ಸಾರಾಂಶ

ಕ್ರಿಕೆಟಿಗರಾಗಿ ಹೆಸರು ಮಾಡಿ ರಾಜಕಾರಣಿಯಾಗಿ ಪರಿವರ್ತನೆ ಮಾಡಿ ಅಧಿಕಾರನ್ನು ಅನುಭವಿಸುತ್ತಿರುವ ನವಜೋತ್ ಸಿಂಗ್ ಸಿಧು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಖಂಡರೊಬ್ಬರ ಹೇಳಿಕೆ ಸಮರ್ಥಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ನವದೆಹಲಿ[ಅ.1] ಅಫೀಮು ಬೆಳೆಯುವುದನ್ನು ಕಾನೂನುಬದ್ಧಗೊಳಿಸಬೇಕು ಎಂಬ ಆಮ್‌ ಆದ್ಮಿ ಪಕ್ಷದ ನಾಯಕ ಧರಮ್‌ವೀರ್‌ ಗಾಂಧಿ ಅವರ ಆಗ್ರಹವನ್ನು ಪಂಜಾಬ್ ಮಂತ್ರಿ ನವಜೋತ್ ಸಿಂಗ್ ಸಿಧು ಸಮರ್ಥಿಸಿಕೊಂಡಿದ್ದಾರೆ.

 ಮಾಧ್ಯಮದವರೊಂದಿಗೆ ಮಾತನಾಡಿದ  ಸಿಧು ಔಷಧವಾಗಿ ಅಫೀಮು ಬಳಕೆ ಮಾಡಿದ್ದರಿಂದ ನನ್ನ ಚಿಕ್ಕಪ್ಪ ದೀರ್ಘ‌ಕಾಲ ಬದುಕಿದ್ದಾರೆ. ಧರಮ್‌ವೀರ್‌ ಗಾಂಧಿ ಸರಿಯಾದುದನ್ನೇ ಹೇಳಿದ್ದಾರೆ. ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಸಿಧು ಹೇಳಿದ್ದಾರೆ.

ಧರಮ್‌ ವೀರ್‌ ಗಾಂಧಿ ಅವರು ಕಳೆದ ಕೆಲವು ವರ್ಷಗಳಿಂದಲೂ  ಪಂಜಾಬ್ ನಲ್ಲಿ ಅಫೀಮು ಬೆಳೆಯುವುದನ್ನು ಕಾನೂನು ಬದ್ಧಗೊಳಿಸಬೇಕೆಂದು ಅನೇಕ ಸಂದರ್ಭಗಳಲ್ಲಿ ಆಗ್ರಹಿಸುತ್ತಾ ಬಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಭೇಟಿ ಮಾಡಿ ಮಾತುಕತೆ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?