
ಕಲ್ಲಿಕೋಟೆ: ಮಹತ್ವದ ಸುಪ್ರೀಂ ಕೋರ್ಟ್ ತೀರ್ಪಿನ ಮುಖೇನ ತನ್ನ ವಿವಾಹವನ್ನು ಊರ್ಜಿತಗೊಳಿಸಿ, ಕೇರಳಕ್ಕೆ ಹಿಂದಿರುಗಿರುವ ಹಾದಿಯಾ, ಎರಡು ಮುಸ್ಲಿಂ ಸಂಘಟನೆಗಳನ್ನು ದೂರುವ ಮೂಲಕ ಹೊಸ ವಿವಾದವೊಂದಕ್ಕೆ ಕಾರಣಳಾಗಿದ್ದಾಳೆ.
ಶಫೀನ್ ಜಹಾನ್ ಜೊತೆಗಿನ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳ ಸಂದರ್ಭ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾತ್ರ ತನ್ನ ಬೆಂಬಲಕ್ಕೆ ನಿಂತಿತ್ತು. ಜಮಾತೆ ಇಸ್ಲಾಮಿ ಮತ್ತು ತರ್ಬಿಯ್ಯಾತ್ ಸಹಾಯ ಮಾಡಲು ನಿರಾಕರಿಸಿವೆ ಎಂದು ಹಾದಿಯಾ ಪತ್ರಕರ್ತರೊಂದಿಗೆ ಮಾತನಾಡುತ್ತಾ
ಹೇಳಿದ್ದಾಳೆ. ‘ನಾನು ಇಸ್ಲಾಂ ಸ್ವೀಕರಿಸಬೇಕೆಂದು ಬಯ ಸಿ ಜಮಾತೆ ಇಸ್ಲಾಮಿ ಮತ್ತು ತರ್ಬಿಯ್ಯಾತ್ ಸಹಾಯ ಯಾಚಿಸಿದಾಗ, ಎರಡೂ ಸಂಘಟನೆಗಳು ನನಗೆ ಸಹಾಯ ಮಾಡಲು ನಿರಾಕರಿಸಿದವು. ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೆ ನಮ್ಮ ಪರವಾಗಿ ಪಿಎಫ್‌ಐ ಮಾತ್ರ ನಿಂತಿತ್ತು’ ಎಂದು ಹಾದಿಯಾ ತಿಳಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.