ಈರುಳ್ಳಿ ಬೆಳೆದ ರೈತನ ಕಣ್ಣಲ್ಲಿ ನೀರು!: ಒಂದು ಕೆಜಿ ಈರುಳ್ಳಿಗೆ ಕೇವಲ 1ರೂಪಾಯಿ!

Published : Oct 26, 2016, 03:05 AM ISTUpdated : Apr 11, 2018, 01:01 PM IST
ಈರುಳ್ಳಿ ಬೆಳೆದ ರೈತನ ಕಣ್ಣಲ್ಲಿ ನೀರು!: ಒಂದು ಕೆಜಿ ಈರುಳ್ಳಿಗೆ ಕೇವಲ 1ರೂಪಾಯಿ!

ಸಾರಾಂಶ

ಈರುಳ್ಳಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಜೀವನ ಹೇಗೆ ನಡೆಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇದಕ್ಕೆ ಕಾರಣ ಈರುಳ್ಳಿ ಬೆಲೆ ಕುಸಿತ. ಈರುಳ್ಳಿ ದರ ಎರಡು ದಶಕಗಳ ಹಿಂದೆ ಇದ್ದ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ರಾಜ್ಯದ ಎಪಿಎಂಸಿ ಯಾರ್ಡ್'ಗಳಲ್ಲಿ ಒಂದು ಕೆ.ಜಿ ಈರುಳ್ಳಿ ದರ 1ರಿಂದ 5ರೂಗೆ ಸೀಮಿತವಾಗಿದೆ. ಕಳೆದ ವರ್ಷ ಈ ಹೊತ್ತಿಗೆ ಕ್ವಿಂಟಾಲ್  ಈರುಳ್ಳಿಗೆ 3 ರಿಂದ 5 ಸಾವಿರ ರೂ ಇತ್ತು. ಆದರೆ ಈ ವರ್ಷ 250 ರಿಂದ 300 ರೂಪಾಯಿಗೆ ಕುಸಿತ ಕಂಡಿದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ 15 ರೂ.ಗಿಂತ ಕಡಿಮೆಗೆ ಸಿಗುತ್ತಿಲ್ಲ. ಬೆಳೆದ ರೈತನಿಗೆ ಕೆ.ಜಿಗೆ 3-4 ರೂ., ಖರೀದಿಸುವವರಿಗೆ ಕೆ.ಜಿಗೆ 15 ರೂ. ಇದರ ನಡುವಿನ ಭಾರಿ ವ್ಯತ್ಯಾಸದ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯಲ್ಲಿರುವ ದೋಷಗಳಿಗೆ ಸಾಕ್ಷಿಯಾಗಿದೆ.

ಬೆಂಗಳೂರು(ಅ.26): ಈರುಳ್ಳಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಜೀವನ ಹೇಗೆ ನಡೆಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇದಕ್ಕೆ ಕಾರಣ ಈರುಳ್ಳಿ ಬೆಲೆ ಕುಸಿತ. ಈರುಳ್ಳಿ ದರ ಎರಡು ದಶಕಗಳ ಹಿಂದೆ ಇದ್ದ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ರಾಜ್ಯದ ಎಪಿಎಂಸಿ ಯಾರ್ಡ್'ಗಳಲ್ಲಿ ಒಂದು ಕೆ.ಜಿ ಈರುಳ್ಳಿ ದರ 1ರಿಂದ 5ರೂಗೆ ಸೀಮಿತವಾಗಿದೆ.

ಕಳೆದ ವರ್ಷ ಈ ಹೊತ್ತಿಗೆ ಕ್ವಿಂಟಾಲ್  ಈರುಳ್ಳಿಗೆ 3 ರಿಂದ 5 ಸಾವಿರ ರೂ ಇತ್ತು. ಆದರೆ ಈ ವರ್ಷ 250 ರಿಂದ 300 ರೂಪಾಯಿಗೆ ಕುಸಿತ ಕಂಡಿದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ 15 ರೂ.ಗಿಂತ ಕಡಿಮೆಗೆ ಸಿಗುತ್ತಿಲ್ಲ. ಬೆಳೆದ ರೈತನಿಗೆ ಕೆ.ಜಿಗೆ 3-4 ರೂ., ಖರೀದಿಸುವವರಿಗೆ ಕೆ.ಜಿಗೆ 15 ರೂ. ಇದರ ನಡುವಿನ ಭಾರಿ ವ್ಯತ್ಯಾಸದ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯಲ್ಲಿರುವ ದೋಷಗಳಿಗೆ ಸಾಕ್ಷಿಯಾಗಿದೆ.

ಈರುಳ್ಳಿ  ಕುಸಿತಕ್ಕೆ ಅನೇಕ ಕಾರಣಗಳಿವೆ. ಈ ಬಾರಿ ಯಥೇಚ್ಚ ಪ್ರಮಾಣದಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದಾರೆ. ದಸರಾ ಹಬ್ಬದ ಸತತ ರಜೆಗಳ ನಂತರ ಒಂದೇ ಬಾರಿಗೆ ಎಲ್ಲ ರೈತರು ಈರುಳ್ಳಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಣೆ ಮಾಡಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನಗಳಿಂದ ಬಂದಿರುವ ಈರುಳ್ಳಿ ದಾಸ್ತಾನು ಇನ್ನು ಖಾಲಿಯಾಗಿಲ್ಲ. ಮಹಾರಾಷ್ಟ್ರದ ಈರುಳ್ಳಿಯ ಮುಂದೆ ನಮ್ಮ ರಾಜ್ಯದ ಈರುಳ್ಳಿಯ ಶೆಲ್ಫ್ ಲೈಫ್  ಕಡಿಮೆಯಿದೆ. ಕಾವೇರಿ ನದಿ ನೀರು ವಿವಾದದಿಂದ ತಮಿಳುನಾಡು ವ್ಯಾಪಾರಿಗಳು  ಈರುಳ್ಳಿ ಖರೀದಿಗೆ ಮುಂದಾಗುತ್ತಿಲ್ಲ. ರಾಜ್ಯದಲ್ಲಿ ಈರುಳ್ಳಿಗೆ ಸರಿಯಾದ ರಫ್ತು ವ್ಯವಸ್ಥೆ ಇಲ್ಲ. ಎಪಿಎಂಸಿಗಳಲ್ಲಿ ಗೋದಾಮುಗಳಿಲ್ಲ. ಈ ಎಲ್ಲಾ ಕಾರಣಗಳಿಂದ ಬೆಲೆ ಕುಸಿತಗೊಂಡಿದ್ದು, ರೈತರು ಕಂಗಲಾಗಿದ್ದಾರೆ.

 ಬೆಂಗಳೂರು            -  1 ರಿಂದ 5ರೂ.

 ಹುಬ್ಬಳ್ಳಿ                  -  2 ರಿಂದ 5ರೂ.

 ದಾವಣಗೆರೆ             - 2 ರಿಂದ 5ರೂ.

 ಚಿತ್ರದುರ್ಗ              - 2 ರಿಂದ 3ರೂ.

 ಹಾವೇರಿ                 - 1 ರಿಂದ 5ರೂ.

 ಮೈಸೂರು              - 1 ರಿಂದ 5ರೂ.

 ಧಾರವಾಡ               - 2 ರಿಂದ 3ರೂ.

 ಸಣ್ಣ ಈರುಳ್ಳಿ                     - 5 ರಿಂದ 8 ರೂ.

 ಮಧ್ಯಮ ಗಾತ್ರ ಈರುಳ್ಳಿ        -15 ರೂ.

 ದೊಡ್ಡ  ಈರುಳ್ಳಿ                  - 20 ರೂ.

 

ಹಾಪ್ ಕಾಮ್ಸ್ ದರ     - 18 ರೂ.

ಬಿಗ್ ಬಜಾರ್            - 19 ರೂ.

ಮೋರ್                    - 16 ರೂ.

ಬೆಲೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರು ಈರುಳ್ಳಿಯನ್ನು ರಸ್ತೆಗೆ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ರೈತರಿಗೆ ಬೆಂಬಲ ಬೆಲ ದೊರಕಿಸಿಕೊಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!